Lift Collapse : ಲಿಫ್ಟ್ ಕುಸಿದು 8 ಜನ ಕಾರ್ಮಿಕರ ಸಾವು

Lift Collapse

ಗುಜರಾತ್​​ನ ಅಲಹಾಬಾದ್​​ನಲ್ಲಿ ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಪತನಗೊಂಡು (lift collapse) 7 ಮಂದಿ ಕಟ್ಟಡ ಕಾರ್ಮಿಕರು ಮೃತಪಟ್ಟಿದ್ಧಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.

ಗುಜರಾತ್ ವಿಶ್ವವಿದ್ಯಾಲಯದ ಸಮೀಪ ಈ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಕಾರ್ಮಿಕರನ್ನು ಕೊಂಡೊಯ್ಯುತ್ತಿದ್ದ ಲಿಫ್ಟ್ 7ನೇ ಅಂತಸ್ತಿನಿಂದ ಕೆಳಗೆ ಬಿದ್ದಿದೆ (lift collapse) ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

7 ಜನ ಮೃತರಾದ ಕಾರ್ಮಿಕರನ್ನು ಸಂಜಯ್​ಬೈ ಬಾಬುಬೈ ನಾಯಕ್, ಜಗದೀಶ್​ಬೈ ರಮೇಶ್​ಬೈ ನಾಯಕ್, ಅಶ್ವಿನಿಬೈ ಸೋಮ್​ಬೈ ನಾಯಕ್, ಮುಖೇಶ್ ಭರತ್​ಬೈ ನಾಯಕ್, ಮುಖೇಶ್​ಬೈ ಭರತ್​​ಬೈ ನಾಯಕ್, ರಾಜ್​ಮಲ್ ಸುರೇಶ್​ಬೈ ಕರಡಿ ಮತ್ತು ಪಂಕಜ್​ಬೈ ಶಂಕರ್​​ಬೈ ಕರಡಿ ಎಂದು ಗುರುತಿಸಲಾಗಿದೆ.

ದುರ್ಘಟನೆಯಲ್ಲಿ 7 ಜನ ಕಾರ್ಮಿಕರು ಸಾವಿಗೀಡಾಗಿದ್ದಾರೆ ಎಂದು ಡಿಸಿಪಿ ಲವಿನಾ ಸಿನ್ಹಾ ಹೇಳಿದ್ದಾರೆ. ಇದನ್ನೂ ಓದಿ : ಪ್ರವಾಹ ಭೀತಿ: ಹೋಟೆಲ್ ಮಹಡಿಯಲ್ಲಿ ಸಿಲುಕಿದವರನ್ನು ಏರ್ ಲಿಫ್ಟ್ ಮಾಡಿ ರಕ್ಷಣೆ

LEAVE A REPLY

Please enter your comment!
Please enter your name here