ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹ ಲಕ್ಷ್ಮೀ ಯೋಜನೆ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಆದೇಶ ಪ್ರಕಟಿಸಿದೆ.
ಕಾರ್ಡ್ನಲ್ಲಿರುವ ಯಜಮಾನಿಯೇ ಗೃಹ ಲಕ್ಷ್ಮೀ ಯೋಜನೆ ಫಲಾನುಭವಿ:
1. ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡ್ದಾರರು, ಅಂತ್ಯೋದಯ ಕಾರ್ಡ್ದಾರರು ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಯೋಜನೆಯ ಲಾಭ ಸಿಗಲಿದೆ.
2. ಬಿಪಿಎಲ್, ಅಂತ್ಯೋದಯ, ಎಪಿಎಲ್ ಕಾರ್ಡ್ಗಳಲ್ಲಿ ಯಜಮಾನಿ ಎಂದು ನಮೂದಿಸಿರುವ ಮಹಿಳೆಯೇ ಖಾತೆಗೆ 2 ಸಾವಿರ ರೂಪಾಯಿ ಜಮೆ ಆಗಲಿದೆ.
3. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಂದು ಮಹಿಳೆಗೆ ಮಾತ್ರ 2 ಸಾವಿರ ರೂಪಾಯಿ ಸಿಗಲಿದೆ.
ಆದಾಯ ತೆರಿಗೆ ಮತ್ತು ಜಿಎಸ್ಟಿ ತೆರಿಗೆ ಸಲ್ಲಿಸುವವರಿಗೆ ಗೃಹ ಲಕ್ಷ್ಮೀ ಇಲ್ಲ:
1. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅವರಿಗೆ ಈ ಯೋಜನೆಯ ಲಾಭ ಸಿಗಲ್ಲ.
2. ಕುಟುಂಬದ ಯಜಮಾನಿ ಅಥವಾ ಆಕೆಯ ಪತಿ ಜಿಎಸ್ಟಿ ತೆರಿಗೆ ಸಲ್ಲಿಸುತ್ತಿದ್ದರೆ ಅವರಿಗೂ ಈ ಯೋಜನೆಯ ಲಾಭ ಸಿಗಲ್ಲ.
ಗೃಹ ಲಕ್ಷ್ಮೀ ಯೋಜನೆ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆದೇಶ ಹೊರಡಿಸಿದೆ.
ಜೂನ್ 15ರಿಂದ ಜುಲೈ 15ರವರೆಗೆ ಸೇವಾ ಸಿಂಧು ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಇರಲಿದೆ. ಆಗಸ್ಟ್ 15ರಿಂದ ಫಲಾನುಭವಿಗಳ ಖಾತೆಗೆ ತಿಂಗಳಿಗೆ 2 ಸಾವಿರ ರೂಪಾಯಿ ಜಮೆ ಆಗಲಿದೆ.
ADVERTISEMENT
ADVERTISEMENT