Bengaluru: ನಡು ರಸ್ತೆಯಲ್ಲಿ ಬೀದಿ ರೌಡಿಗಳ ಪುಂಡಾಟ – ಮೂವರ ಬಂಧನ

ಬೆಂಗಳೂರು ಹೊರವಲಯದಲ್ಲಿ ಪುಂಡರ ಹಾವಳಿ ಹೆಚ್ಚುತ್ತಿದೆ. ಬೇಕು ಬೇಕು ಅಂತಲೇ ನಡು ರಸ್ತೆಲಿ ಕಿರಿಕ್ ತೆಗೆದು ಕಾರ್​ನಲ್ಲಿದ್ದವರ ಮೇಲೆ ನಾಲ್ವರು ದಾಳಿ ನಡೆಸಲು ನೋಡಿದ ಘಟನೆ  ರೋಡ್ ರೇಜ್ ಘಟನೆ ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಡಿಎಸ್​ಆರ್​ ರಿವೇರಾದಿಂದ ವರ್ತೂರು ಸಂಪರ್ಕಿಸುವ ರಸ್ತೆಯಲ್ಲಿ ನಡೆದಿದೆ.

ಎರಡು ಬೈಕ್​ಗಳು ಕಾರ್​ನವರಿಗೆ ಜಾಗ ಬಿಡದೇ ನಿಧಾನಕ್ಕೆ ಅಡ್ಡಾದಿಡ್ಡಿಯಾಗಿ ಸಾಗುತ್ತಿದ್ದವು. ಕಾರ್ ಚಾಲಕ ಹಾರ್ನ್ ಮಾಡಿದ್ದನ್ನೆ ನೆಪ ಮಾಡಿಕೊಂಡ ಪುಂಡರು, ವಿರಳ ವಾಹನ ಸಂಚಾರ ಇರುವ ಪ್ರದೇಶದಲ್ಲಿ ನಡು ರಸ್ತೆಯಲ್ಲಿ ಬೈಕ್​​ಗಳನ್ನು ನಿಲ್ಲಿಸಿ, ಕಾರನ್ನು ಅಡ್ಡಗಟ್ಟಿ ದಾಳಿ ನಡೆಸಿದ್ದರು.

ಎರಡು ಬೈಕ್​ಗಳಲ್ಲಿದ್ದ ಪುಂಡರಿಗೆ ಇನ್ನಿಬ್ಬರು ಬೈಕ್​ ಸವಾರರು ಜೊತೆಯಾದರು.. ಘಟನೆಯಲ್ಲಿ ಕಾರಿನ ಗಾಜು ಜಖಂ ಆಯಿತು.

ಆದರೆ. ಎದೆಗುಂದದ ಕಾರ್ ಚಾಲಕ ಚಾಕಚಕ್ಯತೆಯಿಂದ ಕಾರನ್ನು ರಿವರ್ಸ್​ ಓಡಿಸಿ ಅಪಾಯದಿಂದ ಪಾರಾಗಿದ್ದರು.

ಈ ಎಲ್ಲಾ ಘಟನಾವಳಿ ಕಾರ್​ನ ಫ್ರಂಟ್ ಕೆಮರಾದಲ್ಲಿ ಸೆರೆ ಆಗಿತ್ತು. ಈ ಸಂಬಂಧ ಕಾರ್​ ಮಾಲಿಕ ರೋನ್ ಬೆಂಗಳೂರು ನಗರ ಪೊಲೀಸರಿಗೆ ಟ್ವಿಟ್ಟರ್​ ಮೂಲಕ ವೀಡಿಯೋ ಸಮೇತ ದೂರು ನೀಡಿದ್ದರು.

 

ಕೂಡಲೇ ಸ್ಪಂದಿಸಿದ ವರ್ತೂರು ಠಾಣೆ ಪೊಲೀಸರು , ವೈಟ್​ಫೀಲ್ಡ್ ಡಿಸಿಪಿ ಎಸ್​ ಗಿರೀಶ್​ ಮಾರ್ಗದರ್ಶನದಲ್ಲಿ ರಾತ್ರೋರಾತ್ರಿ ಕಾರ್ಯಚರಣೆ ನಡೆಸಿ ಮೂವರು ಪುಂಡರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೇಶವಮೂರ್ತಿ. ರವೀಂದ್ರ, ಗಣೇಶ್​ ಎಂದು ಗುರುತಿಸಲಾಗಿದೆ. ಇವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

LEAVE A REPLY

Please enter your comment!
Please enter your name here