ನಿಂತಿದ್ದ ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದ ಮತ್ತೊಂದು ಗೂಡ್ಸ್​ ರೈಲು

ಪಶ್ಚಿಮ ಬಂಗಾಳ ರಾಜ್ಯದ ಬಂಕುರಾ ಜಿಲ್ಲೆಯ ಓಂಡಾದಲ್ಲಿ ಎರಡು ಗೂಡ್ಸ್​​ ರೈಲುಗಳು ಡಿಕ್ಕಿಯಾಗಿವೆ.

ಹಳಿಯಲ್ಲಿ ನಿಂತಿದ್ದ ಒಂದು ಗೂಡ್ಸ್​ ರೈಲಿಗೆ ಅದೇ ಹಳಿಯಲ್ಲಿ ಬಂದ ಮತ್ತೊಂದು ಗೂಡ್ಸ್​ ರೈಲು ಡಿಕ್ಕಿ ಹೊಡೆದಿದೆ.

ಗೂಡ್ಸ್​ ರೈಲುಗಳ 12 ಬೋಗಿಗಳು ಹಳಿ ತಪ್ಪಿವೆ.

ಈ ಮಾರ್ಗದಲ್ಲಿ ಸಂಚರಿಸುವ 12 ರೈಲುಗಳ ಓಡಾಟವನ್ನು ರದ್ದಗೊಳಿಸಲಾಗಿದೆ.

ಪ್ರಾಥಮಿಕ ತನಿಖೆ ಪ್ರಕಾರ ಸಿಗ್ನಲ್​ ದೋಷದಿಂದಾಗಿ ಅಪಘಾತವಾಗಿ ಎಂಬ ಮಾಹಿತಿ ಸಿಕ್ಕಿದೆ.