ಬೆಂಗಳೂರಿಗರಿಗೆ ಗುಡ್ ನ್ಯೂಸ್ : ನಾಳೆಯಿಂದಲೇ ಮನೆಮನೆಗೆ ಕಾವೇರಿ ನೀರು

BWSSB

ಕಳೆದ ಒಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ಬಹುತೇಕ ಬಾಗಗಳು ಅಸ್ತವ್ಯಸ್ತಗೊಂಡಿವೆ. ಇದೇ ವೇಳೆ, ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ಮಂಡ್ಯದ ಪಂಪ್​ಹೌಸ್​ನಲ್ಲಿಯೂ ನೀರು ತುಂಬಿಕೊಂಡಿತ್ತು. ಇದರಿಂದ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ತಾತ್ವಾರ ಉಂಟಾಗಿತ್ತು.

ಇದೀಗ, ಬೃಹತ್ ಬೆಂಗಳೂರು ನೀರು ಸರಬರಾಜು ಮಂಡಳಿ(BWSSB) ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ ನೀಡಿದೆ.

ಮಂಡ್ಯದ ಕೆ.ಟಿ.ಹಳ್ಳಿಯಲ್ಲಿ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ಪಂಪ್​ ಹೌಸ್​ ಇದೆ. ಈ ಪಂಪ್​ ಹೌಸ್​​ ಕಳೆದ ಎರಡು ದಿನ ಮಳೆ ನೀರಿನಿಂದಾಗಿ ತುಂಬಿಕೊಂಡಿತ್ತು. ಈ ಪರಿಣಾಮದಿಂದ ಪಂಪ್​ಹೌಸ್​ ಆರಂಭಿಸಲಾಗದೇ, ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡಲು ಆಗಿರಲಿಲ್ಲ. ಇದನ್ನೂ ಓದಿ : ಬೆಂಗಳೂರು ಮಳೆಯಲ್ಲಿ ನಟಿ ರಮ್ಯಾರ ರಾಜಕೀಯ ಪ್ರಶ್ನೆಗಳು

ಬೆಂಗಳೂರು ನೀರು ಸರಬರಾಜು ಮಂಡಳಿಯ (BWSSB) ಸಿಬ್ಬಂದಿ ಕಳೆದ 24 ಗಂಟೆಗಳ ಕಾಲ ನಿರಂತರ ಕೆಲಸ ಮಾಡುವ ಮೂಲಕ ಪಂಪ್​ಹೌಸ್​ ಮತ್ತೆ ಕಾರ್ಯಾರಂಭಿಸುವಂತೆ ಮಾಡಿದ್ದಾರೆ. ಆ ಮೂಲಕ ನಾಳೆ ಬುಧವಾರದಿಂದಲೇ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಆಗಲಿದೆ.

ಕೆಟಿ ಹಳ್ಳಿಯಲ್ಲಿನ ಪಂಪ್​ಹೌಸ್​​ನಲ್ಲನ ಎಲ್ಲಾ 4 ಹಂತದ ಪಂಪ್​ಸೆಟ್​ಗಳು ಕಾರ್ಯ ಆರಂಭಿಸಿವೆ. ಇದನ್ನೂ ಓದಿ : Rain Effect – ಪ್ರಯಾಣಿಕರೇ ಗಮನಿಸಿ – ಬೆಂಗಳೂರು: ಮೈಸೂರು ನಡುವೆ ಸಂಚಾರ  ಬೇಡ

LEAVE A REPLY

Please enter your comment!
Please enter your name here