ADVERTISEMENT
ಬಂಗಾರದ ಬೆಲೆಯಲ್ಲಿ ಸತತ ಎರಡನೇ ದಿನವೂ ಇಳಿಕೆಯಾಗಿದೆ. ಎರಡೇ ದಿನದಲ್ಲಿ ಚಿನ್ನದ ಬೆಲೆ 2 ಸಾವಿರ ರೂಪಾಯಿಯಷ್ಟು ಇಳಿಕೆಯಾಗಿದೆ.
22 ಕ್ಯಾರೆಟ್ ಗುಣಮಟ್ಟದ 10 ಗ್ರಾಂ ಚಿನ್ನದ ಬೆಲೆ 298 ರೂಪಾಯಿಯಷ್ಟು ಇಳಿಕೆಯಾಗಿದ್ದರೆ, 24 ಕ್ಯಾರೆಟ್ ಗುಣಮಟ್ಟದ ಚಿನ್ನದ ಬೆಲೆ 325 ರೂಪಾಯಿಯಷ್ಟು ಇಳಿಕೆಯಾಗಿದೆ.
22 ಕ್ಯಾರೆಟ್ ಗುಣಮಟ್ಟದ 10 ಗ್ರಾಂ ಚಿನ್ನದ ಬೆಲೆ 69 ಸಾವಿರ ರೂಪಾಯಿಗೆ ಇಳಿದಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 75,273 ರೂಪಾಯಿಗೆ ಇಳಿದಿದೆ.
ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,785 ರೂಪಾಯಿಯಷ್ಟು ಕಡಿಮೆ ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 1,636 ರೂಪಾಯಿಯಷ್ಟು ಇಳಿಕೆಯಾಗಿತ್ತು.
ADVERTISEMENT