ದೇಶದ ಚಿನ್ನ ಹಾಗೂ ಬೆಳ್ಳಿ ಮಾರುಕಟ್ಟೆಯ ಧಾರಣೆಯಲ್ಲಿ ಒಂದೇ ದಿನದಲ್ಲಿ ಬಾರೀ ದರ ಇಳಿಕೆಯಾಗಿದೆ.
ಸೋಮವಾರ ಚಿನ್ನದ ದರ 321 ರೂ.ಗಳಷ್ಟು ಇಳಿಕೆಯಾಗಿ 51,270 ರೂಗಳಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆ ಕೆಜಿಗೆ 870 ರೂ,ಗಳಷ್ಟು ಇಳಿಕೆಯಾಗಿ 60,745 ರೂ.ಗಳಿಗೆ ಇಳಿಕೆಯಾಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದೇ ದೇಶದಲ್ಲಿಯೂ ಚಿನ್ನದ ಬೆಲೆ ಇಳಿಕೆಗೆ ಕಾರಣ ಎಂದು ತಿಳಿದುಬಂದಿದೆ.