ಗೋಕಲ್​ದಾಸ್​ ಇಮೇಜಸ್​​ ಮಾಲೀಕ ಜಗದೀಶ್​ ಹಿಂದೂಜಾ ನಿಧನ

ದೇಶದ ಪ್ರಮುಖ ಟೆಕ್ಸ್​​ಟೈಲ್​ ಕಂಪನಿ ಗೋಕಲ್​ದಾಸ್​ ಇಮೇಜಸ್​​​ನ (Gokaldas Images) ಮಾಲೀಕರಾದ ಜಗದೀಶ್​ ನರೈನ್​ದಾಸ್​ ಹಿಂದೂಜಾ (Jagadish Naraindas Hinduja) ಇನ್ನಿಲ್ಲ.

77 ವರ್ಷದ ಅವರು ಶುಕ್ರವಾರ ನಿಧನರಾಗಿದ್ದಾರೆ. ಇವರು ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಇವರು ಪತ್ನಿ ಪುಷ್ಪಾ ಹಿಂದೂಜಾ ಮತ್ತು ಇಬ್ಬರು ಪುತ್ರರಾದ ಸುಮಿರ್​ ಮತ್ತು ಮುನಿಶ್​ ಹಿಂದೂಜಾ ಅವರನ್ನು ಅಗಲಿದ್ದಾರೆ.

ಟೆಕ್ಸ್​ಟೈಲ್​ ಉದ್ಯಮದ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಜಗದೀಶ್​ ಹಿಂದೂಜಾ ಅವರು ತಮ್ಮ ಕಂಪನಿಯ ನೌಕರರ ಬಗ್ಗೆ ವಹಿಸುತ್ತಿದ್ದ ಕಾಳಜಿಯಿಂದಲೂ ಗೌರವಕ್ಕೆ ಪಾತ್ರರಾಗಿದ್ದರು.

 

LEAVE A REPLY

Please enter your comment!
Please enter your name here