ಪೊಲೀಸ್‌ ಅಧಿಕಾರಿ ಗಣಪತಿ ಆತ್ಮಹತ್ಯೆಗೆ ಜಾರ್ಜ್ ಕಾರಣ ಅಲ್ಲ – ಸಿಬಿಐ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಬಿಜೆಪಿ ಮತ್ತು ಜೆಡಿಎಸ್‌ ಕೈಗೆ ಅಸ್ತ್ರವಾಗಿ ಸಿಕ್ಕಿದ್ದ ಪೊಲೀಸ್‌ ಅಧಿಕಾರಿ ಎಂ ಕೆ ಗಣಪತಿ ಆತ್ಮಹತ್ಯೆಗೂ ಈ ಹಿಂದೆ ಗೃಹ ಸಚಿವರಾಗಿದ್ದ ಕೆ ಜೆ ಜಾರ್ಜ್ ಕಾರಣ ಅಲ್ಲ ಎಂದು ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ತನಿಖಾ ವರದಿ ಸಲ್ಲಿಸಿದೆ.

ಗಣಪತಿ ಆತ್ಮಹತ್ಯೆ ಆರೋಪದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮಣಿದು ಜಾರ್ಜ್‌ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು.

ಆತ್ಮಹತ್ಯೆಗೂ ಮೊದಲು ತಾವೇ ರೆಕಾರ್ಡ್‌ ಮಾಡಿದ್ದ ವೀಡಿಯೋದಲ್ಲಿ ಗಣಪತಿ ಮಾಡಿದ್ದ ಆರೋಪಗಳಿಗೂ ಜಾರ್ಜ್‌ಗೂ ಯಾವುದೇ ಸಂಬಂಧ ಇಲ್ಲ. ೨೦೦೮ರಲ್ಲಿ ನಡೆದಿದೆ ಎನ್ನಲಾದ ಘಟನೆಗಳನ್ನು ನೆಪವಾಗಿಟ್ಟುಕೊಂಡು ಜಾರ್ಜ್ ಕಿರುಕುಳ ಕೊಟ್ಟಿದ್ದಾರೆ ಎನ್ನುವುದನ್ನು ನಂಬಲು ಸಾಧ್ಯವಿಲ್ಲ.

ಕರ್ತವ್ಯಲೋಪ ಎಸಗಿದ್ದ ಗಣಪತಿ:

ಗಣಪತಿ ಸೇವೆಯಲ್ಲಿದ್ದ ಸೇವೆ ಕರ್ತವ್ಯಲೋಪ ಎಸಗಿದ್ದ ಬಗ್ಗೆ ಸಾಕ್ಯಗಳಿವೆ. ಅವರ ಮೇಲೆ ಆಗಾಗ್ಗೇ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಡಿವೈಎಸ್‌ಪಿ ಅವರ ಬಡ್ತಿ ಮತ್ತು ವೇತನ ಹೆಚ್ಚಳದ ಮೇಲೆ ಇದ್ಯಾವುದೂ ಪರಿಣಾಮ ಬಿದ್ದಿಲ್ಲ ಎಂದು ಸಿಬಿಐ ತಾನು ಸಲ್ಲಿಸಿದ್ದ ಬಿ ರಿಪೋರ್ಟ್ನಲ್ಲಿ ಹೇಳಿದೆ.

ಐಪಿಎಸ್‌ ಅಧಿಕಾರಿಗಳಾಗಿರುವ ಪ್ರಣಬ್‌ ಮೊಹಂತಿ ಮತ್ತು ಪ್ರಸಾದ್‌ ಅವರ ಮೇಲೂ ಗಣಪತಿ ಮಾಡಿದ್ದ ಕಿರುಕುಳ ಆರೋಪಕ್ಕೆ ಪುರಾವೆಗಳೇ ಇಲ್ಲ ಎಂದು ಸಿಬಿಐ ಹೇಳಿದೆ.

ಈ ಹಿಂದೆ ಐಎಎಸ್‌ ಅಧಿಕಾರಿ ಆಗಿದ್ದ ಡಿ ಕೆ ರವಿ ಆತ್ಮಹತ್ಯೆ ಪ್ರಕರಣದಲ್ಲೂ ಕೆ ಜೆ ಜಾರ್ಜ್ ಗೆ ಸಿಬಿಐ ಕ್ಲೀನ್‌ಚಿಟ್‌ ನೀಡಿತ್ತು

LEAVE A REPLY

Please enter your comment!
Please enter your name here