ನಟ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ನಟನೆಯ ಗಾಳಿಪಟ 2(Gaalipata 2) ಬಿಡುಗಡೆಯಾದ ಮೊದಲ ದಿನವೇ ಬಾನೆತ್ತರಕ್ಕೆ ಹಾರಿದೆ.
ಯೋಗರಾಜ್ ಭಟ್ ಹಾಗೂ ಗಣೇಶ್ ಜೋಡಿಯ ದಶಕದ ಹಿಂದಿನ ಚಿತ್ರ ಗಾಳಿಪಟ ತುಂಬಾ ಯಶಸ್ವಿ ಗಳಿಸಿತ್ತು. ಇದೀಗ, ಅದೇ ಹೆಸರಿನಲ್ಲಿ ಈ ಜೋಡಿ ಮತ್ತೊಮ್ಮೆ ಒಂದಾಗಿ ಕಮಾಲ್ ಮಾಡಿದೆ.
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗಾಳಿಪಟ 2(Gaalipata 2) ಸಿನೆಮಾ ಅಗಸ್ಟ್ 12 ರಂದು ಭರ್ಜರಿ ಓಪನಿಂಗ್ ಪಡೆದುಕೊಂಡು ಬಿಡುಗಡೆಯಾಗಿದೆ.
ಮೊದಲ ದಿನವೇ ಚಿತ್ರಕ್ಕೆ ಮಾಸ್ ರೆಸ್ಪಾನ್ಸ್ ಸಿಕ್ಕಿರುವುದು ಚಿತ್ರತಂಡದ ಸಂತೋಷಕ್ಕೆ ಕಾರಣವಾಗಿದೆ. ಇದೇ ಮೊದಲ ಬಾರಿ ಗಣೇಶ್ ನಟನೆಯ ಚಿತ್ರಕ್ಕೆ ಮಾಸ್ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರದ ಗಳಿಕೆಯೂ ಭರ್ಜರಿಯಾಗಿದೆ ಎನ್ನಲಾಗುತ್ತಿದೆ.
ಮೊದಲ ದಿನದ ಕಲೆಕ್ಷನ್ ಎಷ್ಟು..?
ಗಾಳಿಪಟ 2 ಚಿತ್ರ ರಾಜ್ಯದಲ್ಲಿ 700 ಸ್ಕ್ರೀನ್, ಹೊರ ರಾಜ್ಯಗಳಲ್ಲಿ 200 ಸ್ಕ್ರೀನ್ ಹಾಗೂ ವಿದೇಶದ 250 ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿತ್ತು.
ಒಟ್ಟಾರೆ ಈ ಎಲ್ಲಾ ಸ್ಕ್ರೀನ್ಗಳ ಮೂಲಕ ಮೊದಲ ದಿನವೇ 13 ಕೋ.ರೂ. ಗಳಿಕೆ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಇದು ನಟ ಗಣೇಶ್ ಕೆರಿಯರ್ ನಲ್ಲೇ ಮೊದಲ ದಿನದ ಅತಿ ಹೆಚ್ಚು ಗಳಿಕೆಯಾಗಿದೆ ಎನ್ನಲಾಗುತ್ತಿದೆ.
ನಟ ಅನಂತ್ಕುಮಾರ್, ನಟಿ ಶರ್ಮಿಳಾ ಮಾಂಡ್ರೆ, ನಟಿ ವೈಷ್ನವಿ ಹಾಗೂ ನಿಶ್ವಿತಾ ನಾಯ್ಡು ಅವರ ನಟನೆಯೂ ಚಿತ್ರದಲ್ಲಿ ಮೋಹಕವಾಗಿ ಮೂಡಿಬಂದಿದೆ.
ಇದನ್ನೂ ಓದಿ : Ranveer Singh : ಬೆತ್ತಲೆ ಫೋಟೋಶೂಟ್ಗೆ ನೋಟಿಸ್ ಜಾರಿ
ಇಂದು ಮತ್ತೆ ನಾಳೆ ವಾರಾಂತ್ಯ ಆಗಿರುವುದರಿಂದ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಈಗಾಗಲೇ ರಾಜ್ಯದ ಪ್ರೇಕ್ಷಕರು ಬಹುತೇಕ ಥಿಯೇಟರ್ಗಳಲ್ಲಿ ಬುಕ್ಮೈ ಶೋ ಮೂಲಕ ಬುಕಿಂಗ್ ಮಾಡಿಕೊಂಡಿದ್ದಾರೆ.
ಈ ವಾರಾಂತ್ಯದಲ್ಲಿ ಚಿತ್ರದ ಕೆಲಕ್ಷನ್ 50 ಕೋ.ರೂ ದಾಟಬಹುದು ಎಂದು ಅಂದಾಜಿಸಲಾಗಿದೆ.
ಥಿಯೇಟರ್ಗಳು ಬಹುತೇಕ ಹೌಸ್ಫುಲ್ಗೆ ಸಾಕ್ಷಿ
(ನಟ ಗಣೇಶ್, ದಿಗಂತ್, ಪವನ್ಕುಮಾರ್ ನಟನೆಯ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಪ್ರೇಕ್ಷಕರ ವಿಮರ್ಶೆ)