ಇಂಗ್ಲೆಂಡ್ ರಾಣಿ ಎಲೆಜಬೆತ್ ಅಂತ್ಯಕ್ರಿಯೆ : ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ

President Droupadi Murmu

ಇದೇ ಸೆಪ್ಟಂಬರ್ 8 ರಂದು ಇಂಗ್ಲೆಂಡನ್ನು ಸುದೀರ್ಘ 70 ವರ್ಷಗಳ ಕಾಲ ಆಳಿದ್ದ ಎಲೆಜಬೆತ್ 2 ಸಾವನ್ನಪ್ಪಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಭಾಗವಹಿಸಲಿದ್ದಾರೆ.

ಬ್ರಿಟನ್​ನ ಲಂಡನ್​ನಲ್ಲಿ ಇದೇ ಸೆಪ್ಟಂಬರ್ 17 ರಿಂದ 19 ರ ವರೆಗೆ ಎಲೆಜಬೆತ್​​ ಅವರ ಅಂತ್ಯಕ್ರಿಯೆ ನಡೆಯಲಿದೆ. ಈ ಸಮಯದಲ್ಲಿ ದ್ರೌಪದಿ ಮುರ್ಮು ಅವರು ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಸೆಪ್ಟಂಬರ್ 8 ರಂದು ರಾಣಿ ಎಲೆಜಬೆತ್​ ಸಾವನ್ನಪ್ಪಿದ್ದ ನಂತರ ಭಾರತ ಸರ್ಕಾರ ಅವರ ಅಂತ್ಯಕ್ರಿಯೆಗೆ ಸಂತಾಪ ಸೂಚಿಸಿತ್ತು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu), ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್​ ಅವರೂ ಸಹಿತ ಎಲೆಜಬೆತ್ ನಿಧನಕ್ಕೆ ಸಂತಾಪ ಸೂಚಿಸಿದ್ದರು.

ಸೆಪ್ಟಂಬರ್ 11 ರಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆ ಆಚರಣೆ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಮಾಡಿತ್ತು. ಇದನ್ನೂ ಓದಿ : Big Breaking : ಬಾರದ ಲೋಕಕ್ಕೆ ಇಂಗ್ಲೆಂಡ್​ ರಾಣಿ

LEAVE A REPLY

Please enter your comment!
Please enter your name here