ಏಕಾಏಕಿ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದಿಂದ ತಮಗೆ ಆಗಿರುವ ನಷ್ಟವನ್ನು ಭರ್ತಿ ಮಾಡಿಕೊಡುವಂತೆ ಆಗ್ರಹಿಸಿರುವ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಇವತ್ತು ತೈಲ ಕಂಪನಿಗಳಿAದ ಪೆಟ್ರೋಲ್, ಡೀಸೆಲ್ ಖರೀದಿ ಮಾಡದೇ ಇರಲು ನಿರ್ಧರಿಸಿದೆ.
ಕರ್ನಾಟಕ, ತಮಿಳುನಾಡು, ಮಹಾರಾಷ್ಟç, ಕೇರಳ, ರಾಜಸ್ಥಾನ, ಗುಜರಾತ್, ದೆಹಲಿ ಒಳಗೊಂಡAತೆ 22 ರಾಜ್ಯಗಳಲ್ಲಿ ಇವತ್ತು ಪೆಟ್ರೋಲ್-ಡೀಸೆಲ್ ಸ್ಟಾಕ್ ಖರೀದಿಸದೇ ಇರಲು ಡೀಲರ್ಗಳು ನಿರ್ಧರಿಸಿದ್ದಾರೆ.
ಜೂನ್ 2017ರಿಂದ ಪ್ರತಿ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಳಿತ ವ್ಯವಸ್ಥೆ ಜಾರಿ ಆದ ಬಳಿಕ 8 ಬಾರಿ ಅಬಕಾರಿ ಸುಂಕ ಪರಿಷ್ಕರಣೆ ಆಗಿದೆ. ಐದು ಬಾರಿ ಅಬಕಾರಿ ಸುಂಕ ಕಡಿಮೆ ಆಗಿದ್ದರಿಂದ ಗ್ರಾಹಕರಿಗೆ ನಾವೂ ಬೆಲೆ ಇಳಿಸಬೇಕಾಗಿದ್ದು, ಇದರಿಂದ ನಮಗೆ ನಷ್ಟವಾಗುತ್ತಿದೆ’ ಎಂದು ಡೀಲರ್ಗಳು ಹೇಳಿದ್ದಾರೆ.
`ಮೂರು ಬಾರಿ ಅಬಕಾರಿ ಸುಂಕ ಹೆಚ್ಚಳ ಆದ ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ’ ಎಂದು ಡೀಲರ್ಗಳು ಹೇಳಿದ್ದಾರೆ.