ಉಚಿತ ವಿದ್ಯುತ್​ – ರಾಜ್ಯ ಸರ್ಕಾರದಿಂದ ಆದೇಶ ವಾಪಸ್​

ಪರಿಶಿಷ್ಟ ಜಾತಿ (SC) ಮತ್ತು ಪಂಗಡಳಿಗೆ (ST) ಉಚಿತ ವಿದ್ಯುತ್​ ನೀಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಸರ್ಕಾರ ತಾನು ಹೊರಡಿಸಿದ್ದ ಆದೇಶವನ್ನು ವಾಪಸ್​ ಪಡೆದಿದೆ.
ಎಸ್​ಸಿ ಮತ್ತು ಎಸ್​ಟಿ ಸಮುದಾಯದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ತಿಂಗಳು 75 ಯುನಿಟ್​ ಉಚಿತ ವಿದ್ಯುತ್​ ನೀಡುವ ಸಂಬಂಧ ಆಗಸ್ಟ್​ 24ರಂದು ಇಂಧನ ಇಲಾಖೆ ಆದೇಶ ಹೊರಡಿಸಿತ್ತು.
ಆದರೆ ಉಚಿತ ವಿದ್ಯುತ್​ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಆಗಸ್ಟ್​ 24ರಂದು ನೀಡಿದ್ದ ಈ ಆದೇಶವನ್ನು ರಾಜ್ಯ ಸರ್ಕಾರ ಸೆಪ್ಟೆಂಬರ್​ 3ರಂದು ವಾಪಸ್​ ಪಡೆದಿದೆ.
ಉಚಿತ ವಿದ್ಯುತ್​ ವಾಪಸ್​ ಪಡೆಯುವ ನಿರ್ಧಾರವನ್ನು ಮಾಜಿ ಸಚಿವ ಹೆಚ್​ ಸಿ ಮಹದೇವಪ್ಪ ಖಂಡಿಸಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮನೆಗಳಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಆದೇಶವನ್ನು ಸರ್ಕಾರ ಹಿಂಪಡೆದಿದ್ದು ಕೆಳ ವರ್ಗದ ಜನ ಸಾಮಾನ್ಯರ ಮೇಲಿನ ತನ್ನ ಎಂದಿನ ಅಸಹನೆಯನ್ನು‌ ಮುಂದುವರೆಸಿದೆ.

ಆಡಳಿತ ಎಂದರೆ ಅಸಮಾನತೆ, ಸರ್ಕಾರ ಎಂದರೆ 40% ಲೂಟಿ ಎಂದು ತಿಳಿದಿರುವ ಇವರಿಗೆ ಕೆಳ ವರ್ಗದ ಜನರ ಬದುಕಾಗಲೀ ಇಲ್ಲವೇ ಅವರ ಕಷ್ಟವಾಗಲೀ ಅರ್ಥವಾಗುವುದಿಲ್ಲ. ಇವರು ಹತ್ತು ಲಕ್ಷ ಕೋಟಿ ಕಾರ್ಪೊರೇಟ್ ಸಾಲವನ್ನು ಬೇಕಾದರೆ ಮನ್ನಾ ಮಾಡುತ್ತಾರೆ, ಆದರೆ ಬಡವರಿಗೆ ಸೌಲಭ್ಯ ವಿತರಣೆಯ ವಿಷಯದಲ್ಲಿ ಆಸಕ್ತಿ ತೋರುವುದಿಲ್ಲ

ಅಭಿವೃದ್ಧಿ ಮತ್ತು ಆಡಳಿತದಲ್ಲಿ ದೇಶ ಮತ್ತೆ ಹಿಂದಕ್ಕೆ ಚಲಿಸುತ್ತಿರುವುದಕ್ಕೆ ಇದೊಂದು ಉತ್ತಮ ಉದಾಹರಣೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಒಗ್ಗಟ್ಟಾಗದೇ ಹೋದರೆ ಇದಕ್ಕಿಂತ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

LEAVE A REPLY

Please enter your comment!
Please enter your name here