ಉಚಿತ ವಿದ್ಯುತ್​: ಬಾಡಿಗೆ ಮನೆಯವರು ಆಧಾರ್​ ಜೋಡಣೆ ಮಾಡಿದರೆ ಸಾಕು

ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್​ ಪಡೆಯಲು ಬಾಡಿಗೆ ಮನೆಯವರು ವಿದ್ಯುತ್​ ಮೀಟರ್​ನ ಆರ್​ ಆರ್​ ಸಂಖ್ಯೆಯ ಜೊತೆಗೆ ತಮ್ಮ ಆಧಾರ್​ ಸಂಖ್ಯೆಯನ್ನು ಜೋಡಣೆ ಮಾಡಿದರೆ ಸಾಕು.

ಗೃಹ ಜ್ಯೋತಿ ಯೋಜನೆಯ ಬಗ್ಗೆ ಉಂಟಾಗಿರುವ ಗೊಂದಲಗಳ ಬಗ್ಗೆ ಪ್ರಶ್ನೋತ್ತರ ಮಾದರಿಯಲ್ಲಿ ಇಂಧನ ಇಲಾಖೆ ಆಧೀನ ಕಾರ್ಯದರ್ಶಿ ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ.

1. ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ವಿದ್ಯುತ್​ ಬಳಕೆದಾರರು ವಾಸದ ಮನೆಯ ವಿಳಾಸಕ್ಕೆ ಸಂಬಂಧಿಸಿದಂತೆ ಆಧಾರ್​ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್​ನಲ್ಲಿ ಜೋಡಣೆ ಮಾಡಿ ನೋಂದಾಯಿಸುವ ಮೂಲಕ ಸೌಲಭ್ಯವನ್ನು ಪಡೆಯಬಹುದು 

ಎಂದು ಇಂಧನ ಇಲಾಖೆ ಹೇಳಿದೆ.

2. ಬಹು ಮನೆಗಳಿರುವ ಅಪಾರ್ಟ್​ಮೆಂಟ್​ಗಳಿಗೂ ಈ ಯೋಜನೆಯ ಲಾಭ ಸಿಗಲಿದೆ. ಯಾವ ಯಾವ ಮನೆಗಳಿಗೆ ಪ್ರತ್ಯೇಕ ವಿದ್ಯುತ್​ ಮೀಟರ್​ ಇದೆಯೋ ಹಾಗೂ ಮೀಟರ್​ ರೀಡಿಂಗ್​​ ಮಾಡಲಾಗುತ್ತಿದೆಯೋ ಅಂತಹ ಎಲ್ಲ ಮನೆಗಳಿಗೂ ಯೋಜನೆಯ ಲಾಭ ಸಿಗಲಿದೆ

ಎಂದು ಇಂಧನ ಇಲಾಖೆ ಆಧೀನ ಕಾರ್ಯದರ್ಶಿ ತಮ್ಮ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.