ಹೊಸ ಮನೆ, ಹೊಸ ಮನೆಯ ಬಾಡಿಗೆದಾರರಿಗೆ ಎಷ್ಟು ಯುನಿಟ್​ ವಿದ್ಯುತ್​ Free..? ಇಲ್ಲಿದೆ ಹೊಸ ಸೂತ್ರ

ಜುಲೈ 1ರಿಂದ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ನೀಡಲು ತೀರ್ಮಾನಿಸಿರುವ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಹೊಸ ಬಾಡಿಗೆದಾರರು ಮತ್ತು ಹೊಸ ಮನೆಯನ್ನು ಕಟ್ಟಿದವರಿಗೆ ಹೊಸ ಸೂತ್ರ ಮುಂದಿಟ್ಟಿದೆ.

ಹೊಸದಾಗಿ ಮನೆ ಕಟ್ಟಿದವರಿಗೆ ಜುಲೈ 1ರಿಂದ 53 ಯುನಿಟ್​ ಜೊತೆಗೆ ಶೇಕಡಾ 10ರಷ್ಟು ಹೆಚ್ಚುವರಿ ಯುನಿಟ್​ ವಿದ್ಯುತ್​ ಉಚಿತವಾಗಿ ಸಿಗಲಿದೆ. ಅಂದರೆ 58 ಯುನಿಟ್​ ಉಚಿತ ವಿದ್ಯುತ್​ ಸಿಗಲಿದೆ.

ಹೊಸ ಮನೆ ಬಾಡಿಗೆದಾರರಿಗೂ ಗರಿಷ್ಠ 58 ಯುನಿಟ್​ ಉಚಿತವಾಗಿ ಸಿಗಲಿದೆ.

58 ಯುನಿಟ್​ ಮೇಲ್ಪಟ್ಟು ವಿದ್ಯುತ್​ ಬಳಸಿದರೆ ಆಗ ಆ ಹೆಚ್ಚುವರಿ ವಿದ್ಯುತ್​ ಬಳಕೆಗಷ್ಟೇ ಶುಲ್ಕ ಪಾವತಿಸಬೇಕಾಗುತ್ತದೆ. 

ಉದಾಹರಣೆ: ಹೊಸ ಮನೆಯವರು ಮತ್ತು ಹೊಸ ಮನೆಗೆ ಬಾಡಿಗೆದಾರರು 110 ಯುನಿಟ್​ ಬಳಸಿದರೆ ಆಗ 58-110 = 42 ಯುನಿಟ್​ಗೆ ಹಣ ಪಾವತಿಬೇಕಾಗುತ್ತದೆ.

ರಾಜ್ಯದಲ್ಲಿ ಮನೆ ಬಳಕೆಯ ವಿದ್ಯುತ್​ ಪ್ರಮಾಣ ತಿಂಗಳಿಗೆ ಸರಾಸರಿ 53 ಯುನಿಟ್​ನಷ್ಟಿದೆ. ಹೊಸ ಮನೆ ಮತ್ತು ಹೊಸ ಮನೆಗೆ ಬಾಡಿಗೆ ಹೋಗುವವರಿಗೆ ಕಳೆದ ವರ್ಷದ ಏಪ್ರಿಲ್​ನಿಂದ ಈ ವರ್ಷದ ಮಾರ್ಚ್​ ಅಂತ್ಯದವರೆಗೆ  12 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಲೆಕ್ಕಾಚಾರ ಇಲ್ಲದಿರುವ ಕಾರಣ ರಾಜ್ಯದಲ್ಲಾಗುವ ಸರಾಸರಿ ವಿದ್ಯುತ್​ ಬಳಕೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ.

 ಹೊಸ ಮನೆಯವರಿಗೆ ಹಂತ ಹಂತವಾಗಿ 200 ಯೂನಿಟ್ ಸಿಗಲಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್​ ಹೇಳಿದ್ದಾರೆ.