ಚುನಾವಣೆ ವೇಳೆ ಕಾಂಗ್ರೆಸ್ ಭರವಸೆ ಕೊಟ್ಟಂತೆ ರಾಜ್ಯದ ಎಲ್ಲ ಕುಟುಂಬಗಳಿಗೂ ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್ ಸಿಗುವುದು ಬಹುತೇಕ ಖಚಿತವಾಗಿದೆ.
200 ಯುನಿಟ್ ಉಚಿತ ವಿದ್ಯುತ್ ಗ್ಯಾರಂಟಿ ಯೋಜನೆ ಜಾರಿ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಉನ್ನತ ಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರ ಮುಂದೆ ಇಡಲಾದ ಉಚಿತ ವಿದ್ಯುತ್ ಗ್ಯಾರಂಟಿ ಯೋಜನೆಯ ಲೆಕ್ಕಾಚಾರ ಹೀಗಿದೆ.
1. 200 ಯುನಿಟ್ ಉಚಿತ ವಿದ್ಯುತ್ ಯೋಜನೆಯಿಂದ 2.14 ಕೋಟಿ ಕುಟುಂಬಗಳಿಗೆ ಲಾಭವಾಗಲಿದೆ.
2. ವಾರ್ಷಿಕ ವಿದ್ಯುತ್ ಬಳಕೆ 13,575 ಮಿಲಿಯನ್ ಯುನಿಟ್ಗಳು ಎಂದು ಅಂದಾಜಿಸಲಾಗಿದೆ.
3. ಇಂಧನ ಶುಲ್ಕಗಳು 8,008 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
4. ನಿಗದಿತ ಶುಲ್ಕಗಳು, ತೆರಿಗೆ, ಇತ್ಯಾದಿಗಳನ್ನು ಒಳಗೊಂಡಂತೆ ಸಹಾಯಧನಕ್ಕೆ ಅಗತ್ಯವಿರುವ ಮೊತ್ತ 12,038 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
5. ಸುಮಾರು 1.27 ಕೋಟಿ ಬಿಪಿಎಲ್ ಕಾರ್ಡ್ದಾರರ ಸಂಖ್ಯೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ತೆಗೆದುಕೊಳ್ಳಲಾಗಿದೆ.
ಗೃಹ ಜ್ಯೋತಿ 200 ಯುನಿಟ್ ಉಚಿತ ಯೋಜನೆ ಜಾರಿಯ ಪ್ರಸ್ತಾಪಕ್ಕೆ ಆಧಾರ:
1. ಮಾರ್ಚ್ 2023ರ ವಿದ್ಯುತ್ ಬಿಲ್ಗಳಲ್ಲಿ 200 ಯುನಿಟ್ಗಳಿಂದ ಕಡಿಮೆ ವಿದ್ಯುತ್ ಬಳಸಿದ ವಸತಿ ಸ್ಥಾವರಗಳ ಒಟ್ಟು ಸಂಖ್ಯೆ
2. ಮಾರ್ಚ್ 2023ರ ಬಳಕೆಯ ಆಧಾರದ ಮೇಲೆ ವಾರ್ಷಿಕ ಬಳಕೆಯ ಯುನಿಟ್/ವಿದ್ಯುತ್ ಬಳಕೆಯನ್ನು ಅಂದಾಜಿಸಲಾಗಿದೆ.
ADVERTISEMENT
ADVERTISEMENT