Free ಬಸ್​ ಪ್ರಯಾಣ – ಮಹಿಳಾ ಪ್ರಯಾಣಿಕರಿಗೆ ಕೊಡುವ Ticket ಈ ರೀತಿ ಇರಲಿದೆ..!

ಜೂನ್​ 11ರಿಂದ ರಾಜ್ಯದಲ್ಲಿ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ. 
ಬಿಎಂಟಿಸಿ, ಕೆಎಸ್​ಆರ್​​ಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ನೈರುತ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಹಣ ನೀಡಬೇಕಿಲ್ಲ.
ಜೂನ್​ 11ರಿಂದ ಬಿಎಂಟಿಸಿ ಬಸ್​ಗಳಲ್ಲಿ ಮಹಿಳೆಯರಿಗೆ ನೀಡಲಾಗುವ ಟಿಕೆಟ್​ ಮೊದಲ ಮಾದರಿ ಲಭ್ಯವಾಗಿದೆ.

ಟಿಕೆಟ್​ನ ಮೇಲ್ಭಾಗದಲ್ಲಿ ಬಿಎಂಟಿಸಿ ಬಸ್​​ ಸಂಖ್ಯೆ ಬಗ್ಗೆ ಮಾಹಿತಿ ಇರಲಿದೆ. ಡಿಪೋ ಸಂಖ್ಯೆಯೂ ನಮೂದಾಗಿರಲಿದೆ.
ಮಹಿಳಾ ಪ್ರಯಾಣಿಕರ ಉಚಿತ ಚೀಟಿ – ಶಕ್ತಿ ಯೋಜನೆ ಎಂದು ಟಿಕೆಟ್​ನಲ್ಲಿ ಮಾಹಿತಿ ಇರಲಿದೆ. ಬಳಿಕ ಎಲ್ಲಿಂದ ಎಲ್ಲಿಗೆ ಸಂಚಾರ ಎಂಬ ಮಾಹಿತಿ ಮುದ್ರಣ ಆಗಲಿದೆ.
ಸಂಗ್ರಹಿಸಿದ ಟಿಕೆಟ್​ ಮೊತ್ತ ಉಲ್ಲೇಖದ ಎದುರಿಗೆ NIL ಎಂದು ಅಂದರೆ ಶೂನ್ಯ ಎಂಬ ಮಾಹಿತಿ ಇರಲಿದೆ.
ಬಸ್​ನಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ ನಮೂದಾಗಲಿದೆ ಮತ್ತು ಒಟ್ಟು ಪ್ರಯಾಣಿಕರ ಸಂಖ್ಯೆಯೂ ಟಿಕೆಟ್​ನಲ್ಲಿ ಇರಲಿದೆ.
ಈ ಮೂಲಕ ಸರ್ಕಾರಕ್ಕೆ ಒಂದು ಬಸ್​ನಲ್ಲಿ ಎಷ್ಟು ಮಹಿಳಾ  ಪ್ರಯಾಣಿಕರು ಪ್ರಯಾಣಿಸಿದ್ದಾರೆ, ಎಷ್ಟು ಜನಕ್ಕೆ ಯೋಜನೆಯ ಲಾಭ ಸಿಕ್ಕಿದೆ ಎಂಬ ಮಾಹಿತಿ ಸಿಗಲಿದೆ.