ಜೂನ್​ 1ರಿಂದ ಉಚಿತ ಬಸ್​ ಪ್ರಯಾಣ ಗ್ಯಾರಂಟಿ ಯೋಜನೆ – ಸಾರಿಗೆ ಸಚಿವರ ಘೋಷಣೆ

ಕಾಂಗ್ರೆಸ್​ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣದ ಗ್ಯಾರಂಟಿ ಜೂನ್​ 1ರಿಂದ ಅಂದರೆ ಗುರುವಾರದಿಂದ ಜಾರಿಯಾಗಲಿದೆ.

ಈ ಬಗ್ಗೆ ಬೆಂಗಳೂರಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.

ಎಲ್ಲ ಸರ್ಕಾರಿ ಬಸ್​ಗಳಲ್ಲಿ ಜೂನ್​ 1ರಿಂದ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದು ಸಚಿವರು ಹೇಳಿದ್ದಾರೆ.

ನಾಳೆ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಚಿವರ ಸಭೆ ಇದೆ. 

ಪ್ರತಿ ದಿನ 82 ಲಕ್ಷ 51 ಸಾವಿರ ಜನ ಸರ್ಕಾರಿ ಬಸ್​ಗಳಲ್ಲಿ ಪ್ರಯಾಣ ಮಾಡ್ತಾರೆ. ಪ್ರತಿ ತಿಂಗಳಿಗೆ ಸರ್ಕಾರಿ ಬಸ್​ಗಳಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆ 24 ಕೋಟಿಯಷ್ಟು ಇದೆ.

ಪ್ರತಿ ದಿನ 23 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಪ್ರತಿ ವರ್ಷ 8,496 ಕೋಟಿ ರೂಪಾಯಿ ಆದಾಯ ಸಾರಿಗೆ ನಿಗಮಗಳಿಗೆ ಬರುತ್ತಿದೆ.