ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಆರಂಭಿಸಿರುವ ಉಚಿತ ಬಸ್ ಪ್ರಯಾಣ ಯೋಜನೆಗೆ ಭಾರೀ ಯಶಸ್ಸು ಸಿಕ್ಕಿದೆ.
ಎರಡನೇ ದಿನ ಸರ್ಕಾರಿ ಬಸ್ಗಳಲ್ಲಿ 41 ಲಕ್ಷದ 34 ಸಾವಿರ ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.
ಮೊದಲ ದಿನವಾದ ಭಾನುವಾರ 11 ಗಂಟೆ ಅವಧಿಯಲ್ಲಿ 5 ಲಕ್ಷದ 71 ಸಾವಿರ ಮಂದಿ ಮಹಿಳೆಯರು ಪ್ರಯಾಣಿಸಿದ್ದರು.
ಎರಡೇ ದಿನದಲ್ಲಿ ಮಹಿಳೆಯರಿಗೆ 10 ಕೋಟಿ ಉಳಿತಾಯ:
ಎರಡು ದಿನದಲ್ಲಿ 47 ಲಕ್ಷದಷ್ಟು ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು ಎರಡೇ ದಿನದಲ್ಲಿ ಅವರಿಗೆ ಒಟ್ಟು 10 ಕೋಟಿ 23 ಲಕ್ಷ ರೂಪಾಯಿ ಉಳಿತಾಯವಾಗಿದೆ.
ಎರಡನೇ ದಿನ:
ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿ 12 ಗಂಟೆವರೆಗಿನ ಪ್ರಯಾಣಿಕರ ಲೆಕ್ಕವನ್ನು ನೋಡಿದರೆ ಒಂದೇ ದಿನದಲ್ಲಿ ಮಹಿಳಾ ಪ್ರಯಾಣಿಕರ ಪ್ರಮಾಣ ಬರೋಬ್ಬರೀ 8 ಪಟ್ಟು ಹೆಚ್ಚಳವಾಗಿದೆ.
ಕೆಎಸ್ಆರ್ಟಿಸಿಯಲ್ಲಿ 11 ಲಕ್ಷದ 40 ಸಾವಿರದ 57 ಮಂದಿ ಮಹಿಳೆಯರು, ಬಿಎಂಟಿಸಿಯಲ್ಲಿ 17 ಲಕ್ಷದ 57 ಸಾವಿರದ 887 ಮಂದಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಲ್ಲಿ 8 ಲಕ್ಷದ 31 ಸಾವಿರದ 840 ಮಂದಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ 4 ಲಕ್ಷದ 4 ಸಾವಿರದ 942 ಮಂದಿ ಮಹಿಳೆಯರು ಪ್ರಯಾಣಿಸಿದ್ದಾರೆ.
ಟಿಕೆಟ್ ಮೊತ್ತ ಎಷ್ಟು..?
ಕೆಎಸ್ಆರ್ಟಿಸಿಯಲ್ಲಿ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರ ಟಿಕೆಟ್ ಮೊತ್ತ 3 ಕೋಟಿ 57 ಲಕ್ಷದ 84 ಸಾವಿರದ 677 ರೂ, ಬಿಎಂಟಿಸಿಯಲ್ಲಿ 1 ಕೋಟಿ 75 ಲಕ್ಷದ 33 ಸಾವಿರದ 234 ರೂಪಾಯಿ, ವಾಯುವ್ಯ ಕರ್ನಾಟಕ ಸಾರಿಗೆಯಲ್ಲಿ 2 ಕೋಟಿ 10 ಲಕ್ಷದ 66 ಸಾವಿರದ 538 ರೂಪಾಯಿ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 1 ಕೋಟಿ 39 ಲಕ್ಷದ 68 ಸಾವಿರದ 885 ರೂಪಾಯಿ ಆಗಿದೆ.
ಅಂದರೆ ಸೋಮವಾರ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರ ಟಿಕೆಟ್ ಮೊತ್ತ 8 ಕೋಟಿ 83 ಲಕ್ಷದ 53 ಸಾವಿರದ 434 ರೂ.
ಬೆಂಗಳೂರಲ್ಲೇ ಅತೀ ಹೆಚ್ಚು:
ಉಳಿದ ಮೂರು ಸಾರಿಗೆನಿಗಮಗಳಿಗೆ ಹೋಲಿಸಿದರೆ ಬಿಎಂಟಿಸಿಯಲ್ಲಿ ಉಚಿತವಾಗಿ ಪ್ರಯಾಣಿಸುತ್ತಿರುವ ಮಹಿಳೆಯರ ಪ್ರಮಾಣ ಅತ್ಯಧಿಕ ಅಂದರೆ 17.5 ಲಕ್ಷದಷ್ಟಿದೆ.
ಎರಡು ದಿನದಲ್ಲಿ:
ಎರಡು ದಿನದಲ್ಲಿ ಉಚಿತವಾಗಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ 47 ಲಕ್ಷಕ್ಕೂ ಅಧಿಕ. ಒಟ್ಟು ವೆಚ್ಚ 10 ಕೋಟಿ 20 ಲಕ್ಷ ರೂಪಾಯಿಗಿಂತಲೂ ಅಧಿಕ.
ADVERTISEMENT
ADVERTISEMENT