ದೇಶದ ಎಲ್ಲ ವಯಸ್ಕರಿಗೂ ಮುಂದಿನ 75 ದಿನ ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ಸಿಗಲಿದ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಎಲ್ಲ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ಸಿಗಲಿದೆ.
ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಕೊಳ್ತಿರುವ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ.
ಸದ್ಯದ ಅಂಕಿಅಂಶದ ಪ್ರಕಾರ ಅರ್ಹ 77 ಕೋಟಿ ವಯಸ್ಕರಲ್ಲಿ (18-59 ವರ್ಷ( ಕೇವಲ ಶೇಕಡಾ 1ರಷ್ಟು ಮಂದಿ ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ.
ಆದರೆ 16 ಕೋಟಿಯಷ್ಟಿರುವ 60 ವರ್ಷ ಮೇಲ್ಪಟ್ಟವರು ಮತ್ತು ಆರೋಗ್ಯ ಕಾರ್ಯಕರ್ತರು ಮತ್ತು ಇತರೆ ಮುಂಚೂಣಿ ಕಾರ್ಯಕರ್ತರಲ್ಲಿ ಶೇಕಡಾ 26ರಷ್ಟು ಮಂದಿ ಬೂಸ್ಟರ್ ಡೋಸ್ ಪಡೆದಿದ್ದಾರೆ.
ADVERTISEMENT
ADVERTISEMENT