ADVERTISEMENT
ಯೂಟ್ಯೂಬ್ ಚಾನೆಲ್ ಹೆಸರು ಹೇಳಿಕೊಂಡು ವ್ಯಾಪಾರಿಗಳಿಂದ ಸುಲಿಗೆ ಮಾಡುತ್ತಿದ್ದ ಕನ್ನಡದ ಯೂಟ್ಯೂಬ್ ಚಾನೆಲ್ನ ನಾಲ್ವರನ್ನು ಬೆಂಗಳೂರು ನಗರದ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಆನಂದ್ ಅಲಿಯಾಸ್ ಫಿಗರ್, ಆತ್ಮಾನಂದ ಅಲಿಯಾಸ್ ಕೃಷ್ಣೇಗೌಡ, ಶ್ರೀನಿವಾಸ ಅಲಿಯಾಸ್ ರೇಷ್ಮೆನಂದು ಶ್ರೀನಿವಾಸ ಮತ್ತು ಕೃಷ್ಣಮೂರ್ತಿ ಬಂಧಿತರು.
ಈ ನಾಲ್ವರು ನಾಲ್ಕು ವರ್ಷಗಳಿಂದ ಎಕೆ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದರು.
ಅಂಗಡಿ ಮಾಲೀಕರ ಬಳಿಗೆ ತೆರಳಿ ಅವರನ್ನು ಬೆದರಿಸಿ ಈ ನಾಲ್ವರು ಸುಲಿಗೆ ಮಾಡುತ್ತಿದ್ದರು. ಇವರ ಕಿರುಕುಳದಿಂದ ಬೇಸತ್ತಿದ್ದ ಕೆ ಆರ್ ಪುರಂನ ಮಾಂಸ ವ್ಯಾಪಾರಿ ಸಾದಿಕ್ ಖಾನ್ ಕೊಟ್ಟ ದೂರು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಇದೇ ರೀತಿ 10ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಈ ನಾಲ್ವರು ಬೆದರಿಸಿ ಹಣ ಸುಲಿಗೆ ಮಾಡಿರುವ ಮಾಹಿತಿ ಇದೆ. ಬಂಧಿತರಿಂದ ಕಾರು, ಮೊಬೈಲ್ ಫೋನ್ ಮತ್ತು 13 ಸಾವಿರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ADVERTISEMENT