ಮಳೆ, ಪ್ರವಾಹದಿಂದ ಹಾನಿ : ಕೇಂದ್ರದ 3 ತಂಡಗಳು ರಾಜ್ಯಕ್ಕೆ, 9 ಜಿಲ್ಲೆಗಳಿಗೆ ಭೇಟಿ

Flood
(ಸಾಂದರ್ಭಿಕ ಚಿತ್ರ)

ರಾಜ್ಯದಲ್ಲಿ ಕಳೆದ ಕೆಲ ತಿಂಗಳುಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಮಳೆ ಹಾಗೂ ಪ್ರವಾಹ ದಿಂದ ಆದ ಹಾನಿಯ ಬಗ್ಗೆ ಅಧ್ಯಯನ ನಡೆಸಲು ಕೇಂದ್ರದಿಂದ ಹಿರಿಯ ಅಧಿಕಾರಿಗಳ ತಂಡ ರಾಜ್ಯಕ್ಕೆ ಬರಲಿದೆ. ಮೂವರು ಅಧಿಕಾರಿಗಳ ತಂಡ ಇದೇ ಸೆ.7 ರಿಂದ ಸೆ.9 ರ ವರಗೆ ರಾಜ್ಯದ ಹಲವು ಭಾಗಗಳಿಗೆ ಭೇಟಿ ನೀಡಲಿದ್ದಾರೆ.

ಜುಲೈ ಮತ್ತು ಅಗಸ್ಟ್​ನಲ್ಲಿ ಸುರಿದ ಮಳೆ ಮತ್ತು ಪ್ರವಾಹದಿಂದ ಬೆಳೆ ನಷ್ಟ ಮತ್ತು ಮೂಲಸೌಕರ್ಯಗಳಿಗೆ ಹಾನಿಯ ಬಗ್ಗೆ ಈ ತಂಡಗಳು ವರದಿ ನೀಡಲಿವೆ ಎಂದು ಕಂದಾಯ ಸಚಿವ ಆರ್​.ಅಶೋಕ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : flood in Pakistan : ಭೀಕರ ಪ್ರವಾಹಕ್ಕೆ 1,300 ಜನ ಬಲಿ, 5 ಲಕ್ಷ ಜನ ನಿರಾಶ್ರಿತ

ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಆಶೀಶ್ ಕುಮಾರ್ ನೇತೃತ್ವದಲ್ಲಿ ಒಟ್ಟು ಮೂರು ತಂಡಗಳು ರಾಜ್ಯದ ವಿವಿದೆಡೆ ಭೇಟಿ ನೀಡಲಿವೆ. ಕೇಂದ್ರ ಜಲ ಆಯೋಗದ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಮತ್ತು ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ಕೆ.ಮನೋಹರನ್ ಇನ್ನುಳಿದ ಎರಡು ತಂಡಗಳಲ್ಲಿ ಇರಲಿದ್ದಾರೆ.

ಈ ಮೂರು ತಂಡಗಳು ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಧಾರವಾಡ, ಗದಗ, ಹಾವೇರಿ, ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದಾದ ಹಾನಿಯ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ಇದನ್ನೂ ಓದಿ : Rain Alert: ಇಂದಿನಿಂದ ಸೆಪ್ಟೆಂಬರ್​ 9ರವರೆಗೆ ಯಾವ-ಯಾವ ಜಿಲ್ಲೆಗಳಲ್ಲಿ ಭಾರೀ ಮಳೆ..? – ಇಲ್ಲಿದೆ ಮಾಹಿತಿ

LEAVE A REPLY

Please enter your comment!
Please enter your name here