ಪ್ರವಾಹ ಸಭೆಯಲ್ಲಿ ಕಂದಾಯ ಸಚಿವ ಅಶೋಕ್​ಗೆ ನಿದ್ದೆ – ಕಾಂಗ್ರೆಸ್​​ ಆಕ್ರೋಶ

Minister R Ashok

ಕಳೆದ ವಾರದಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅರ್ಧ ಬೆಂಗಳೂರೇ ಸಾಗರವಾಗಿ ಮಾರ್ಪಟ್ಟಿದೆ. ಈ ಮಳೆಯಿಂದಾಗಿ ಐಟಿ,ಬಿಟಿ ಸೇರಿದಂತೆ ವಲಸೆ ಕಾರ್ಮಿಕರು, ಸಾಮಾನ್ಯ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಮನೆಗಳಿಗೆ ನೀರು ನುಗ್ಗಿದ್ದರೆ, ಅಪಾರ್ಟ್​​ಮೆಂಟ್​ ಸಮುಚ್ಚಯಗಳು ಈಜುಕೊಳಗಳಾಗಿ ಮಾರ್ಪಟ್ಟಿವೆ.

ಹೀಗೆ, ಬೆಂಗಳೂರಿನಲ್ಲಿ ಸೃಷ್ಠಿಯಾದ ಸಮಸ್ಯೆಯ ಬಗ್ಗೆ ಚರ್ಚಿಸಲು ಕರೆಯಲಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಪ್ರವಾಹ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಹಾಗೂ ಬೆಂಗಳೂರಿನ ಪದ್ಮನಾಭ ನಗರದ ಶಾಸಕ ಆರ್.ಅಶೋಕ್ (Minister R Ashok) ನಿದ್ದೆಯಲ್ಲಿ ಮುಳುಗಿದ್ದಾರೆ. ಇದನ್ನೂ ಓದಿ : ಬೆಂಗಳೂರು ಮಳೆಯಲ್ಲಿ ನಟಿ ರಮ್ಯಾರ ರಾಜಕೀಯ ಪ್ರಶ್ನೆಗಳು

ಈ ಬಗ್ಗೆ ಕಾಂಗ್ರೆಸ್​​ ಆಕ್ರೋಶ ವ್ಯಕ್ತಪಡಿಸಿದ್ದು, ಮುಳುಗುವುದರಲ್ಲಿ ಹಲವು ವಿಧಗಳಿವೆ! ರಾಜ್ಯದ ಜನ ಮಳೆಯಲ್ಲಿ ಮುಳುಗಿದ್ದಾರೆ, ಸಚಿವರು ನಿದ್ದೆಯಲ್ಲಿ ಮುಳುಗಿದ್ದಾರೆ!

ಪ್ರವಾಹ ಪರಿಶೀಲನೆಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಚಿವ ಆರ್.ಅಶೋಕ್ (Minister R Ashok)​ ಅವರ ಭರ್ಜರಿ ನಿದ್ದೆ. ‘ಹಲಾಲ್ ಕಟ್’ ಎಂದರೆ ಥಟ್‌ನೆ ಎಚ್ಚರಾಗುತ್ತಾರೆ! ‘ಚಿಂತೆ ಇಲ್ಲದವಗೆ ಸಂತೆಲೂ ನಿದ್ದೆ’ ಎಂಬ ಮಾತು ಸಚಿವರಿಗೇ ಹೇಳಿದ್ದೇನೋ! ಎಂದು ಕಾಂಗ್ರೆಸ್​​ ಐಟಿ ಘಟಕ ವ್ಯಂಗ್ಯವಾಡಿದೆ.

ಇದನ್ನೂ ಓದಿ : Rain Alert: ಇಂದಿನಿಂದ ಸೆಪ್ಟೆಂಬರ್​ 9ರವರೆಗೆ ಯಾವ-ಯಾವ ಜಿಲ್ಲೆಗಳಲ್ಲಿ ಭಾರೀ ಮಳೆ..? – ಇಲ್ಲಿದೆ ಮಾಹಿತಿ

LEAVE A REPLY

Please enter your comment!
Please enter your name here