Flipkart: ಆದಾಯವೂ ಹೆಚ್ಚಳ, ನಷ್ಟವೂ ಏರಿಕೆ

FLIPKART
FLIPKART
2021-22ನೇ ಆರ್ಥಿಕ ವರ್ಷದಲ್ಲಿ ಇ-ಕಾಮರ್ಸ್ (E Commerce)​​ ಕಂಪನಿ ಫ್ಲಿಪ್​ಕಾರ್ಟ್ (Flipkart)​​ ಬರೋಬ್ಬರೀ 7,800 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.
2020-21ನೇ ಆರ್ಥಿಕ ವರ್ಷದಲ್ಲಿ ಫ್ಲಿಪ್​ಕಾರ್ಟ್​​ 5,352 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು.
ಫ್ಲಿಪ್​ಕಾರ್ಟ್​ ಇಂಟರ್​ನೆಟ್​ (ಆನ್​ಲೈನ್​ ಬ್ಯುಸಿನೆಸ್​ ಕಂಪನಿ) 2020-21ರ ಅವಧಿಯಲ್ಲಿ 2,907 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. ಆದರೆ ಈ ನಷ್ಟದ ಪ್ರಮಾಣ 2021-22ರ ಅವಧಿಯಲ್ಲಿ 4,399 ಕೋಟಿ ರೂಪಾಯಿ ಏರಿಕೆ ಆಗಿದೆ.
ಫ್ಲಿಪ್​ಕಾರ್ಟ್​​ ಗ್ರೂಪ್​ನಲ್ಲಿ ಬರುವ ಮಿನ್ತ್ರಾ, ಇನ್ಸ್​ಸ್ಟಾಕಾರ್ಟ್​, ಬಿ2ಬಿ ಯುನಿಟ್​, ಫ್ಲಿಪ್​ಕಾರ್ಟ್​ ಇಂಡಿಯಾ 2020-21ರ ಅವಧಿಯಲ್ಲಿ 2,445 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. 2021-22ರ ಅವಧಿಯಲ್ಲಿ ಆ ನಷ್ಟದ ಮೊತ್ತ 3,413 ಕೋಟಿ ರೂಪಾಯಿಗೆ ಹೆಚ್ಚಳ ಆಗಿದೆ.
ಫ್ಲಿಪ್​ಕಾರ್ಟ್​ ಆದಾಯ ಶೇಕಡಾ 20ರಷ್ಟು ಅಂದರೆ 61,836 ಕೋಟಿ ರೂಪಾಯಿಗೆ ಹೆಚ್ಚಳ ಆಗಿದೆ. ಫ್ಲಿಪ್​ಕಾರ್ಟ್​ ಇಂಟರ್​ನೆಟ್​ 10,660 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಸೆಪ್ಟೆಂಬರ್​ ಕೊನೆ ವಾರದಲ್ಲಿ ಅಂದರೆ ಹಬ್ಬದ ಅವಧಿಯಲ್ಲಿ ಫ್ಲಿಪ್​ಕಾರ್ಟ್​ 24,800 ಕೋಟಿ ರೂಪಾಯಿ ಮೊತ್ತದ ಉತ್ಪನ್ನಗಳನ್ನು ಮಾರಾಟ ಮಾಡಿದೆ.

LEAVE A REPLY

Please enter your comment!
Please enter your name here