Fitness freak Rahul – ರಾಹುಲ್ ನಡಿಗೆ ಸ್ಪೀಡ್ ಗೆ ಡಿಕೆ, ಸಿದ್ದು ಸುಸ್ತು!

ಕರ್ನಾಟಕದಲ್ಲಿ (karnataka)ಎರಡನೇ ದಿನ ಭಾರತ್ ಜೋಡೋ ಯಾತ್ರೆ (Bharat jodo yatra)ಮುಂದುವರೆದಿದೆ. ಮುಂಜಾನೇ ಮಳೆ ಕಾರಣ 6.30ರ ಬದಲಿಗೆ.. 7.30ಕ್ಕೆ ಚಾಮರಾಜನಗರದ ಬೇಗೂರಿನ ತಾಂಡವಾಡದಿಂದ ರಾಹುಲ್ ಗಾಂಧಿ ಪಾದಯಾತ್ರೆ (Rahul gandhi paadayatra)ಶುರು ಮಾಡಿದರು. ರಾಹುಲ್ ಗಾಂಧಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾಥ್ ನೀಡಿದ್ದಾರೆ.

ರಾಹುಲ್ ಗಾಂಧಿ ನಡಿಗೆಯ ವೇಗಕ್ಕೆ (Walking Speed)ಹೊಂದಿಕೊಳ್ಳಲು ರಾಜ್ಯ ಕಾಂಗ್ರೆಸ್ ನಾಯಕರು ಪರದಾಡುತ್ತಿದ್ದಾರೆ. ರಾಹುಲ್ ಜೊತೆ ಮುಕ್ಕಾಲು ಗಂಟೆ ನಡೆಯುವಷ್ಟರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (Kpcc president DK shivakumar)ಸುಸ್ತಾಗಿ ಹೋದರು. ಹಿಂದೆ ಸರಿದು ನನ್ ಕೈಲಿ ಆಗಲ್ಲ ಎಂದು ವಿಶ್ರಾಂತಿ ಪಡೆಯಲು ಕಾರ್ ಹತ್ತಿದರು.

ಯಾತ್ರೆ ಆರಂಭವಾದ ಒಂದೂವರೆ ಗಂಟೆ  ನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Opposition leader Siddaramaiah)ಕೂಡ ಕಾಲು ನೋವು (Leg pain )ಕಾರಣದಿಂದ ರಾಹುಲ್ ಗಾಂಧಿಗೆ ಶೇಕ್ ಹ್ಯಾಂಡ್ ನೀಡಿ ನಡಿಗೆಯಿಂದ ಹಿಂದೆ ಸರಿದರು.

ಆದರೆ, ರಾಹುಲ್ ಗಾಂಧಿ ಮಾತ್ರ ಇಂದಿನ ಉತ್ಸಾಹದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಮಾರ್ಗ ಮಧ್ಯೆ ಮನೆಯೊಂದರಲ್ಲಿ ರಾಹುಲ್ ಗಾಂಧಿ ಟೀ ಸೇವನೆ ಮಾಡಿ ಯಾತ್ರೆ ಮುಂದುವರೆಸಿದ್ದಾರೆ. ಸದ್ಯ ಭಾರತ್ ಜೋಡೋ ಯಾತ್ರೆ ಮೈಸೂರು ಗಡಿಯನ್ನು ಪ್ರವೇಶಿಸಿದೆ.

ಭಾರತ್ ಜೋಡೋ ಯಾತ್ರೆಯ ಅಂಗವಾಗಿ ರಾಹುಲ್ ಗಾಂಧಿ ಈವರೆಗೂ 500ಕ್ಕೂ ಹೆಚ್ಚು ಕಿಲೋಮೀಟರ್ ದೂರವನ್ನು ನಡಿಗೆಯಲ್ಲಿಯೇ ಕ್ರಮಿಸಿದ್ದಾರೆ. ಉತ್ಸಾಹ ಮಾತ್ರ ಕುಗ್ಗಿಲ್ಲ. ಗುರಿಯೂ ಸ್ಪಷ್ಟವಾಗಿದೆ. ವಯಸ್ಸು 50ದಾಟಿದರೂ ರಾಹುಲ್ ಗಾಂಧಿ ಫಿಟ್ ನೆಸ್ (Rahul gandhi fitness)ಕಾಪಾಡಿಕೊಂಡಿದ್ದಾರೆ.