ಸೈನಾ ನೆಹ್ವಾಲ್​ಗೆ ಅಸಭ್ಯ ಪದ ಬಳಕೆ : ನಟ ಸಿದ್ದಾರ್ಥ್ ವಿರುದ್ಧ ಪ್ರಕರಣ ದಾಖಲು

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರಿಗೆ ಮಾಡಿದ ಅಸಭ್ಯತೆಯ ಕಾಮೆಂಟ್ ಗೆ ನಟ ಸಿದ್ಧಾರ್ಥ್ ಕ್ಷಮೆ ಕೋರಿದ್ದಾರೆ. ಇದೀಗ, ಬಿಜೆಪಿ ನಾಯಕರಾದ ನೀಲಂ ಭಾರ್ಗವ ರಾಮ್ ಮತ್ತು ಪ್ರೇರಣಾ ಟಿ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಹೈದರಾಬಾದ್ ಪೊಲೀಸರು ನಟ ಸಿದ್ಧಾರ್ಥ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ನಟನ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜನವರಿ 5 ರಂದು ಪಂಜಾಬ್‌ನ ಫಿರೋಜ್‌ಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯ ಕೊರತೆಯ ಕುರಿತು ಸೈನಾ ನೆಹ್ವಾಲ್ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ನಟ ಸಿದ್ದಾರ್ಥ್ ಬರೆದ ಟ್ವೀಟ್‌ ಟೀಕೆಗೆ ಗುರಿಯಾಗಿತ್ತು.

ಸಿದ್ಧಾರ್ಥ್ ಅವರು ತಮ್ಮ “ಅಸಭ್ಯ ಹಾಸ್ಯ”ಕ್ಕಾಗಿ ಬುಧವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

LEAVE A REPLY

Please enter your comment!
Please enter your name here