ಇಂದು ಮಧ್ಯರಾತ್ರಿಯಿಂದಲೇ ಫಾಸ್ಟ್‌ ಟ್ಯಾಗ್‌ ಕಡ್ಡಾಯ- ದಂಡ ದುಪ್ಪಟ್ಟು..!

ಟೋಲ್‌ಗೇಟ್‌ಗಳಲ್ಲಿ ಇನ್ನು ನಗದು ವ್ಯವಹಾರ ಇಲ್ಲ. ಇವತ್ತು ಮಧ್ಯರಾತ್ರಿಯಿಂದಲೇ FASTag ಕಡ್ಡಾಯವಾಗಲಿದೆ. ಏನಿದ್ದರೂ ಆನ್‌ಲೈನ್‌ ಮೂಲಕ ಟೋಲ್‌ ಕಟ್ಟಿ ಮುಂದೆ ಸಾಗಬೇಕು. ಇಲ್ಲವಾದರೆ ಟೋಲ್‌ನ ಎರಡು ಪಟ್ಟು ದಂಡ ಕಟ್ಟಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ನಿಯಮ.  ಅಂದಹಾಗೆ ಫಾಸ್ಟ್‌ಟ್ಯಾಗ್‌ ಜಾರಿ ದಿನವನ್ನು 15 ದಿನಗಳ ಮಟ್ಟಿಗೆ ಅಂದರೆ ‌ ಡಿಸೆಂಬರ್‌ 1 ರಿಂದ ಡಿಸೆಂಬರ್‌ 15ರವರೆಗೆ ಸಡಿಲಿಸಲಾಗಿತ್ತು . ಹಾಗಾಗಿ ಇನ್ನಾದರೂ ನೆಪ ಹೇಳದೇ ಆದಷ್ಟು ಬೇಗ ನಿಮ್ಮ ನಿಮ್ಮ ವಾಹನಗಳಿಗೆ FASTags ಗಳನ್ನು ಅಳವಡಿಸಿಕೊಳ್ಳಲೇಬೇಕು.

ಏನಿದು ಫಾಸ್ಟ್‌ಟ್ಯಾಗ್‌..?

ಟ್ಯಾಗ್‌ ಎಂದರೆ ಲೇಬಲ್‌ ಎಂದು ಅರ್ಥ. ವಾಹನದ ಮುಂಭಾಗದ ಗಾಜಿನ ಮೇಲ್ಭಾಗದ ಮಧ್ಯಭಾಗದಲ್ಲಿ ನೀವು ಖರೀದಿಸಿದ FASTags  ಸ್ಟಿಕ್ಕರ್‌ನ್ನು ಅಂಟಿಸಿಬಿಟ್ಟರೆ ನಿಮ್ಮ ವಾಹನ ಟೋಲ್‌ಗೇಟ್‌ನ್ನು ಸಮೀಪಿಸುತ್ತಿದ್ದಂತೆ ಟೋಲ್‌ಗೇಟ್‌ಗಳ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಟ್ಯಾಗ್‌ ಮಾಪಕ (Tag Reader) ರೇಡಿಯೋ ಕಿರಣಗಳನ್ನ ಸೂಸುವ ಮೂಲಕ ಸ್ಟಿಕ್ಕರ್‌ನ್ನು ರೀಡ್‌ ಮಾಡುತ್ತೆ. ತಕ್ಷಣವೇ ನಿಮ್ಮ ಫಾಸ್ಟ್‌ಟ್ಯಾಗ್‌ ಅಕೌಂಟ್‌ನಿಂದ ಎಷ್ಟು ಟೋಲ್‌ ಕಟ್ಟಬೇಕೋ ಅಷ್ಟು ಮೊತ್ತ ಪಾವತಿ ಆಗುತ್ತದೆ. ನೀವು ಟೋಲ್‌ಗೇಟ್‌ನಲ್ಲಿ ವಾಹನವನ್ನು ನಿಲ್ಲಿಸಬೇಕಾದ ಅಗತ್ಯನೂ ಇಲ್ಲ. ನಿಮ್ಮ ಗಾಡಿ ಸಾಗುತ್ತಿದ್ದಂತೆ ಅಟೋಮೆಟಿಕ್‌ಗಾಗಿ ಟೋಲ್‌ ಕಟ್‌ ಆಗುತ್ತದೆ. ಈ ಫಾಸ್ಟ್‌ಟ್ಯಾಗ್‌ಗಳಿಗೆ ಎಕ್ಸ್ಪೈರಿ ದಿನ ಕೂಡಾ ಇರಲ್ಲ.

Image Courtesy: https://www.indiafilings.com/

ಫಾಸ್ಟ್‌ಟ್ಯಾಗ್‌ ಖರೀದಿಸುವುದು ಹೇಗೆ..?

ಅಂದಹಾಗೆ ಫಾಸ್ಟ್‌ಟ್ಯಾಗ್‌ ಖರೀದಿಸುವುದು ಸುಲಭ. ಬ್ಯಾಂಕ್‌ಗಳಿಗೆ ಅಲೆದಾಡುವ ಅಗತ್ಯವಿಲ್ಲ. ಆನ್‌ಲೈನ್‌ ಮೂಲಕ ಖರೀದಿಸಿ ನೀವೇ ಸೆಲ್ಫ್‌ ಆಕ್ಟಿವೇಷನ್‌ ಮಾಡಿಕೊಳ್ಳಬಹುದು. ಆದರೆ ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್‌ ಖರೀದಿ ಮಾಡುವಾಗ ವಾಹನದ ದಾಖಲೆಗಳು(RC), ವಾಹನದ ಸಂಖ್ಯೆ, ಪ್ಯಾನ್‌ ಕಾರ್ಡ್, ಆಧಾರ್‌ ಕಾರ್ಡ್‌ಳನ್ನು ಸಿದ್ಧವಾಗಿ ಇಟ್ಟುಕೊಳ್ಳಿ. ಜೊತೆಗೆ ನಿಮ್ಮ ಈ-ಮೇಲ್‌ ಐಡಿ, ಬ್ಯಾಂಕ್‌ನೊಂದಿಗೆ ಲಿಂಕ್‌ ಹೊಂದಿರುವ ಮೊಬೈಲ್‌ ನಂಬರ್‌, ಬ್ಯಾಂಕ್‌ ಅಕೌಂಟ್‌ನ ಮಾಹಿತಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ. Appಗಳಾದ My FASTag ಮೂಲಕವೂ ಫಾಸ್ಟ್‌ಟ್ಯಾಗ್‌ನ್ನು ಖರೀದಿಸಬಹುದಾಗಿದೆ. ಒಂದು ವೇಳೆ ಬ್ಯಾಂಕ್‌ಗೆ ಹೋಗಿ ನೇರವಾಗಿ ಫಾಸ್ಟ್‌ಟ್ಯಾಗ್‌ ಖರೀದಿಸ್ತೀನಿ ಎಂದರೂ ಅದಕ್ಕೂ ಅವಕಾಶವಿದೆ.

ಜೊತೆಗೆ ಟೋಲ್‌ಫ್ಲಾಜಾಗಳಲ್ಲೇ ನೀವು ಫಾಸ್ಟ್‌ಟ್ಯಾಗ್‌ಗಳನ್ನೂ ಖರೀದಿ ಮಾಡಬಹುದು. ಆದರೆ ಆಗ ದಾಖಲೆಗಳನ್ನು ಸಲ್ಲಿಸುವುದು ಅನಿವಾರ್ಯ.

ನೀವು ಬೇರೆ ಬ್ಯಾಂಕ್‌ಗಳಲ್ಲಿ ಆಫರ್‌ಗಳು ಚೆನ್ನಾಗಿದ್ದಲ್ಲಿ ಆಗ ನೀವು ಬ್ಯಾಂಕ್‌ನಲ್ಲಿ ಖಾತೆಗಳನ್ನು ಹೊಂದಿಲ್ಲದೇ ಹೋದರೂ ಫಾಸ್ಟ್‌ಟ್ಯಾಗ್‌ ಖರೀದಿಸಬಹುದು.

ಫಾಸ್ಟ್‌ಟ್ಯಾಗ್‌ಗೆ ಎಷ್ಟು ಖರ್ಚಾಗುತ್ತೆ..? 

22 ಬ್ಯಾಂಕುಗಳಲ್ಲಿ ಫಾಸ್ಟ್‌ಟ್ಯಾಗ್‌ ಖರೀದಿಗೆ ಅವಕಾಶವಿದೆ. ಜೊತೆಗೆ ಅಮೆಜಾನ್‌ ಮತ್ತು ಪೇಟಿಎಂ ಮೂಲಕ ಫಾಸ್ಟ್‌ಟ್ಯಾಗ್‌ನ್ನು ಖರೀದಿ ಮಾಡಬಹುದು. ಆದರೆ ಫಾಸ್ಟ್‌ಟ್ಯಾಗ್‌ ಖರೀದಿ ವೇಳೆ ಇಂತಿಷ್ಟು ಮೊತ್ತವನ್ನು ಪಕ್ಕಕ್ಕೆ ಇಡುವುದು ಅನಿವಾರ್ಯ.

ಟ್ಯಾಗ್‌ ಆಕ್ಟಿವೇಷನ್‌ ವೇಳೆ ಭದ್ರತಾ ಠೇವಣಿಯನ್ನು ಇಡಬೇಕಾಗುತ್ತದೆ. ಭದ್ರತಾ ಠೇವಣಿಯನ್ನು ನೀವು ಯಾವಾಗ ಫಾಸ್ಟ್‌ಟ್ಯಾಗ್‌ನ್ನು ಕ್ಯಾನ್ಸಲ್‌ ಮಾಡುತ್ತಿರೋ ಆಗ ವಾಪಸ್‌ ಕೊಡುತ್ತಾರೆ. ಅಷ್ಟೇ ಅಲ್ಲದೇ ಟ್ಯಾಗ್‌ ಆಕ್ಟಿವೇಷನ್‌ ಕನಿಷ್ಟ ಮೊತ್ತವನ್ನು ರೀಚಾರ್ಜ್ ಮಾಡಲೇಬೇಕಾಗುತ್ತದೆ.

ಒಳ್ಳೆ ಆಫರ್‌ಗಳು ಸಿಕ್ಕರೆ ನಿಮಗೆ ಇಷ್ಟವಾದ ಬ್ಯಾಂಕ್‌ನಿಂದ ನೀವು ಫಾಸ್ಟ್‌ಟ್ಯಾಗ್‌ ರೀಚಾರ್ಜ್ ಮಾಡಿಸಿಕೊಳ್ಳಬಹುದು.

ಉದಾಹರಣೆಗೆ ಪೇಟಿಎಂನಲ್ಲಿ ಫಾಸ್ಟ್‌ಟ್ಯಾಗ್‌ಗೆ 250 ರೂಪಾಯಿ ಸೆಕ್ಯೂರಿಟಿ ಡೆಪಾಸಿಟ್‌, 150 ರೂಪಾಯಿ ಕನಿಷ್ಟ ಚಾರ್ಜ್ ಮಾಡಲೇಬೇಕಾಗುತ್ತದೆ.

ಒಂದು ವೇಳೆ ನಿಮ್ಮ ಫಾಸ್ಟ್‌ಟ್ಯಾಗ್‌ ನೇರವಾಗಿ ಬ್ಯಾಂಕ್‌ ಖಾತೆಯೊಂದಿಗೆ ಜೋಡಣೆ ಆಗಿದ್ದರೆ ನೀವು ಆಗ ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಆದ್ರೆ ಅಕೌಂಟ್‌ನಲ್ಲಿ ದುಡ್ಡಿರಬೇಕಾಗುತ್ತದೆ.

ಒಂದು ವ್ಯಾಲೆಟ್‌ ಅಂದರೆ ಪೇಟಿಎಂ ಮುಂತಾದ ಕಡೆಗಳಿಂದ ನೀವು ಫಾಸ್ಟ್‌ಟ್ಯಾಗ್‌ ಖರೀದಿ ಮಾಡಿದರೆ ಆಗ ರೀಜಾರ್ಜ್ ಮಾಡಿಕೊಳ್ಳಬೇಕು. ಮೊಬೈಲ್‌ ರೀಚಾರ್ಜ್ ರೀಚಾರ್ಜ್ ಮಾಡಿಸಿಕೊಳ್ಳುವಂತೆ.

LEAVE A REPLY

Please enter your comment!
Please enter your name here