ಇವರೆಲ್ಲ ಫಾಸ್ಟ್‌ಟ್ಯಾಗ್‌ ಖರೀದಿ ಮಾಡ್ಬೇಕಿಲ್ಲ – ಟೋಲ್‌ ರೂಲ್ಸ್‌ ಏನು..?

ಎಲ್ಲಾ ವಾಹನ ಮಾಲೀಕರು ಮತ್ತು ಚಾಲಕರು ಫಾಸ್ಟ್‌ಟ್ಯಾಗ್‌ ಖರೀದಿ ಮಾಡಲೇಬೇಕಾ..? ಇಂಥದ್ದೊಂದು ಪ್ರಶ್ನೆ ಬಹುತೇಕರಿಗೆ ಕಾಡಿರಬಹುದು. ಎಲ್ಲರೂ ಫಾಸ್ಟ್‌ಟ್ಯಾಗ್‌ ಖರೀದಿ ಮಾಡಬೇಕಾದ ಅಗತ್ಯವಿಲ್ಲ. ಕೆಲವರಿಗೆ ಫಾಸ್ಟ್‌ಟ್ಯಾಗ್‌ನಿಂದ ವಿನಾಯಿತಿ ಖಂಡಿತಾ ಇದೆ.

ಯಾರಿಗಿದೆ ವಿನಾಯಿತಿ..?

ಒಂದು ವೇಳೆ ನಿಮ್ಮ ವಾಸಸ್ಥಳ ಟೋಲ್‌ ಪ್ಲಾಜಾದ ೧೦ ಕಿ.ಮೀ ವ್ಯಾಪ್ತಿಯ ಒಳಗಿದ್ದರೆ ಆಗ ನೀವು ಫಾಸ್ಟ್‌ಟ್ಯಾಗ್‌ ಇಲ್ಲದೆಯೇ ಟೋಲ್‌ ಮೂಲಕ ಸಂಚರಿಸಬಹುದು. ಅಂದರೆ ಫಾಸ್ಟ್‌ಟ್ಯಾಗ್‌ ಇಲ್ಲದ ಮಾತ್ರಕ್ಕೆ ನಿಮಗೆ ನಿಗದಿತ ಟೋಲ್‌ನ ಎರಡು ಪಟ್ಟು ಶುಲ್ಕ ಕಟ್ಟುವ ಅಗತ್ಯನೇ ಇರಲ್ಲ. ಆದರೆ ನೀವು ಅದಕ್ಕಾಗಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಏನೆಲ್ಲ ದಾಖಲೆ ಬೇಕು..?

ಒಂದು ವೇಳೆ ನೀವು ಟೋಲ್‌ಪ್ಲಾಜಾದ ೧೦ ಕಿಲೋ ಮೀಟರ್‌ ವ್ಯಾಪ್ತಿಯ ಒಳಗೆ ವಾಸವಾಗಿದ್ದರೆ ಆಗ ವಾಸಸ್ಥಳ ದೃಢೀಕರಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಯಾರಿಗೆ ದಾಖಲೆ ಸಲ್ಲಿಸಬೇಕು..?

ನೀವು ಆ ವಾಸಸ್ಥಳ ದೃಢೀಕರಣ ಪತ್ರವನ್ನು ನಿಮ್ಮ ವ್ಯಾಪ್ತಿಯಲ್ಲಿ ಬರುವ ಟೋಲ್‌ಪ್ಲಾಜಾದ ಅಧಿಕಾರಿಗಳಿಗೆ ಸಲ್ಲಿಕೆ ಮಾಡಬೇಕು, ಅವರು ಆ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನೀವು ಟೋಲ್‌ಪ್ಲಾಜಾದ ೧೦ ಕಿಲೋ ಮೀಟರ್‌ ವ್ಯಾಪ್ತಿಯೊಳಗೆ ವಾಸವಾಗಿದ್ದೀರಿ ಎಂದು ದೃಢೀಕರಿಸುತ್ತಾರೆ. ಆಗ ನಿಮಗೆ ಫಾಸ್ಟ್‌ಟ್ಯಾಗ್‌ ಬಳಕೆಯಿಂದ ವಿನಾಯಿತಿ ಸಿಗುತ್ತದೆ.

ಫಾಸ್ಟ್‌ಟ್ಯಾಗ್‌ ಆಫ್‌ ಮಾಡಿ:

ನೀವು ಎಲ್ಲಿ ವಾಸವಾಗಿದ್ದಿರೋ (೧೦ ಕಿಲೋ ಮೀಟರ್‌ ಒಳಗೆ) ಅಲ್ಲಿನ ಟೋಲ್‌ ಬಳಿ ಹೋಗುವಾಗ ಫಾಸ್ಟ್‌ಟ್ಯಾಗ್‌ನ್ನು ಆಫ್‌ ಮಾಡಿ. ಆಗ ನಿಮ್ಮ ಫಾಸ್ಟ್‌ಟ್ಯಾಗ್‌ ಅಕೌಂಟ್‌ನಿಂದ ಆಟೋಮೆಟಿಕ್‌ ಆಗಿ ಟೋಲ್‌ ಪಾವತಿ ಆಗುವುದು ತಪ್ಪುತ್ತದೆ. ಟೋಲ್‌ ದಾಟಿದ ಬಳಿಕ ಮತ್ತೆ ನೀವು ಫಾಸ್ಟ್‌ಟ್ಯಾಗ್‌ನ್ನು ಆನ್‌ ಮಾಡಿಕೊಳ್ಳಬಹುದು. ಗಮನವಿರಲಿ, ಇದು ನೀವು ವಾಸವಿರುವ ಪ್ರದೇಶದಲ್ಲಿರುವ ಟೋಲ್‌ಗಳಿಗಷ್ಟೇ ಅನ್ವಯ.

LEAVE A REPLY

Please enter your comment!
Please enter your name here