ಫಾಸ್ಟ್‌ಟ್ಯಾಗ್ – ಒಳ್ಳೆ ಆಫರ್‌ಗಳ ಪಟ್ಟಿ ಇಲ್ಲಿದೆ ನೋಡಿ..!

ಫಾಸ್ಟ್‌ಟ್ಯಾಗ್ ಡಿಸೆಂಬರ್ ೧ ರಿಂದ ಟೋಲ್ ಗಳಲ್ಲಿ  ಕಡ್ಡಾಯ ಆಗಿತ್ತು. ಆದರೆ ಅದನ್ನು ಡಿಸೆಂಬರ್ ೧೫ ರವರೆಗೆ ಮುಂದೂಡುವಂತೆ ವಿನಾಯಿತಿ ನೀಡಲಾಗಿದೆ. ಯಾವ ಯಾವ ಬ್ಯಾಂಕ್‌ಗಳಲ್ಲಿ ಒಳ್ಳೆಯ ಆಫರ್‌ ಇದೆ ಎಂಬುದನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಇದು.

ಫಾಸ್ಟ್‌ಟ್ಯಾಗ್ ನೀವು ತೆಗೆದುಕೊಳ್ಳಬೇಕಾದಾಗ ಗಮನಿಸಬೇಕಾದ ಮುಖ್ಯ ಅಂಶಗಳು-

೧. ಮೊದಲ ಬಾರಿಗೆ ಫಾಸ್ಟ್‌ಟ್ಯಾಗ್ ಖರೀದಿಸುವಾಗ ಪಾವತಿಸಬೇಕಾದ ಶುಲ್ಕ

೨. ಫಾಸ್ಟ್‌ಟ್ಯಾಗ್ ಖರೀದಿಸುವಾಗ ಇಡಬೇಕಾದಂತಹ ಸೆಕ್ಯುರಿಟಿ ಡೆಪಾಸಿಟ್‌

೩. ಫಾಸ್ಟ್‌ಟ್ಯಾಗ್  ಖರೀದಿಸುವಾಗ ಮಾಡಬೇಕಾದ ಕನಿಷ್ಟ ರೀಚಾರ್ಜ್

ಈ ಮೂರು  ಅಂಶಗಳನ್ನು ಹೋಲಿಕೆ ಮಾಡಿ ನಾವು ಇಲ್ಲಿ ನಿಮಗೆ ಮಾಹಿತಿಯನ್ನು ಕೊಡುತ್ತೇವೆ. ಇದರ ಜೊತೆಗೆ ಬ್ಯಾಂಕ್‌ ಖಾತೆಯಲ್ಲಿ    ಫಾಸ್ಟ್‌ಟ್ಯಾಗ್  ರೀಚಾರ್ಜ್‌ ವೇಳೆ ಜಿ.ಎಸ್.ಟಿ ಮತ್ತು ಇತರೆ ಶುಲ್ಕಗಳು ಅನ್ವಯವಾಗುತ್ತವೆ. ಆ ಶುಲ್ಕಗಳು ಯಾವ ಯಾವ ಬ್ಯಾಂಕ್‌ನಲ್ಲಿ ಎಷ್ಟೆಷ್ಟು ಇದೆ ಎನ್ನುವ ಮಾಹಿತಿಯು ಇಲ್ಲಿದೆ.

ಜೊತೆಗೆ ಕೆಲವೊಂದು ಬ್ಯಾಂಕ್‌ಗಳು ಫಾಸ್ಟ್‌ಟ್ಯಾಗ್ ಜೊತೆಗೆ ಅಫಘಾತ ವಿಮೆಯನ್ನೂ ಕೂಡ ಕೊಡುತ್ತಿವೆ. ಅದನ್ನೂ ಕೂಡ ಗಮನಿಸಿ ನಿಮಗೆ ಬೇಕಾದ ಬ್ಯಾಂಕ್‌ ಖಾತೆಯಿಂದ ಫಾಸ್ಟ್‌ಟ್ಯಾಗ್ ಖರೀದಿಸಬಹುದು.

ನೀವು ಪ್ರತೀ ಸಲ ಟೋಲ್‌ ಕಟ್ಟಿದಾಗಲೆಲ್ಲಾ ಆ ಟೋಲ್‌ ನ ಮೊತ್ತಕ್ಕೆ ಅನುಗುಣವಾಗಿ ವಾಹನ ಮಾಲೀಕನ ಬ್ಯಾಂಕ್‌ ಖಾತೆಯಿಂದ ಕನಿಷ್ಟ ಶುಲ್ಕ ಕಡಿತವಾಗುತ್ತದೆ. ನೀವು ಆನ್ ಲೈನ್ ರೀಚಾರ್ಜ್‌ ಮಾಡುವಂತಹ ಸಂದರ್ಭದಲ್ಲಿ ಬೇರೆ ಬೇರೆ ಬ್ಯಾಂಕ್ ಗಳು  ಬೇರೆ ಬೇರೆ ಮೊತ್ತದ ಶುಲ್ಕವನ್ನು ವಿಧಿಸುತ್ತವೆ. ಅದರ ವಿವರವನ್ನೂ ಕೂಡ ಕೆಳಗಡೆ ಕೊಟ್ಟಿದ್ದೇವೆ.

ಎಸ್‌ಬಿಐ ಬ್ಯಾಂಕ್‌:

ಕೊಟಕ್‌ ಮಹೀಂದ್ರಾ ಬ್ಯಾಂಕ್‌:ಗಮನಿಸಬೇಕಾದ ಮತ್ತೊಂದು ಅಂಶವೇನೆಂದರೆ , ಒಂದು ವಾಹನದ ಹೆಸರಿನಲ್ಲಿ ನೀವು ಖರೀದಿ ಮಾಡಿದ ಫಾಸ್ಟ್‌ಟ್ಯಾಗ್ ಸ್ಟಿಕ್ಕರನ್ನು  ಬೇರೆ ವಾಹನಕ್ಕೆ ಬಳಸುವಂತಿಲ್ಲ ಅದಕ್ಕೆ ಅನುಮತಿಯಿಲ್ಲ, ಅದು ನಿಯಮಬಾಹಿರ ಒಂದು ವೇಳೆ ಹಾಗೇನಾದರೂ ಮಾಡಿದಲ್ಲಿ ನೀವು ಟೋಲ್‌ ಪ್ಲಾಜಾದಲ್ಲಿ ಸಿಕ್ಕಿಹಾಕಿಕೊಳ್ಳುವ ಪ್ರಸಂಗ ಬರಬಹುದು.

ಐಸಿಐಸಿಐ ಬ್ಯಾಂಕ್‌:

ನೀವು ಒಂದು ವೇಳೆ ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ನಲ್ಲಿ ಫಾಸ್ಟ್‌ಟ್ಯಾಗ್ ಖಾತೆಯನ್ನು ಹೊಂದಿದ್ದರೆ ಆಗ ನಿಮಗೆ ಕೆಲವೊಂದಿಷ್ಟು ರಿಯಾಯಿತಿ ಇರುತ್ತದೆ.

ಪೇಟಿಎಂ:

ಪೇಟಿಎಂನಲ್ಲಿ ಕಾರು, ಜೀಪ್‌, ವ್ಯಾನ್‌ಗಳ ಫಾಸ್ಟ್‌ಟ್ಯಾಗ್‌ ಖರೀದಿಗೆ ಮೊದಲ ಬಾರಿ ಫಾಸ್ಟ್‌ಟ್ಯಾಗ್‌ ಖರೀದಿ ಶುಲ್ಕ ಇರಲ್ಲ. ಜೊತೆಗೆ ಮನೆಗೆ ಉಚಿತ ಡೆಲವರಿ ಕೂಡಾ ಇರುತ್ತೆ. ಸೆಕ್ಯೂರಿಟಿ ಡೆಪಾಸಿಟ್‌ ಮತ್ತು ಮೊದಲ ಬಾರಿಗೆ ರೀಜಾರ್ಜ್ ಶುಲ್ಕ ತುಸು ಹೆಚ್ಚು.

ಹೆಚ್‌ಡಿಎಫ್‌ಸಿ ಬ್ಯಾಂಕ್‌:

ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಡಿಸೆಂಬರ್‌ ೩೧ರೊಳಗೆ ಮೊದಲ ಬಾರಿಗೆ ಫಾಸ್ಟ್‌ಟ್ಯಾಗ್‌ ಖರೀದಿಸಿದರೆ ಆಗ ಮೊದಲ ಬಾರಿ ಖರೀದಿ ಶುಲ್ಕ ಇರಲ್ಲ. ಜೊತೆಗೆ ಶೇ.೨.೫ರಷ್ಟು ಕ್ಯಾಶ್‌ ಬ್ಯಾಕ್‌ ಹಾಗೂ ಆನ್‌ಡ್ಯೂಟಿ ಡ್ರೈವರ್‌ಗಳಿಗೆ ೧ ಲಕ್ಷ ರೂಪಾಯಿವರೆಗೆ ಅಪಘಾತ ವಿಮೆ ರಕ್ಷೆ ಇರುತ್ತೆ.

ಆಕ್ಸಿಸ್‌ ಬ್ಯಾಂಕ್‌:

ಆಕ್ಸಿಸ್‌ ಬ್ಯಾಂಕ್‌ನಲ್ಲಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದು. ಮನೆ ಬಾಗಿಲಿಗೆ ಉಚಿತವಾಗಿಯೇ ಫಾಸ್ಟ್‌ಟ್ಯಾಗ್‌ ಡೆಲಿವರಿ ಮಾಡುತ್ತಾರೆ. ಜೊತೆಗೆ ಮೊದಲ ಬಾರಿಗೆ ಫಾಸ್ಟ್‌ಟ್ಯಾಗ್‌ ಖರೀದಿಗೆ ೧೦೦ ರೂಪಾಯಿ ಕಟ್ಟಬೇಕಾದ ಅಗತ್ಯವಿಲ್ಲ.

LEAVE A REPLY

Please enter your comment!
Please enter your name here