BIG BREAKING – ಫಾಸ್ಟ್‌ಟ್ಯಾಗ್‌ ಅವಧಿ ವಿಸ್ತರಣೆ – ಷರತ್ತುಗಳು ಅನ್ವಯ..!

ಡಿಸೆಂಬರ್‌ 15 ರಂದು ಅಂದರೆ ನಾಳೆಯಿಂದ ದೇಶದ ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್‌ ಕಡ್ಡಾಯ ಆಗಿದೆ. ಆದರೆ ವಾಹನ ಬಳಕೆದಾರರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ನಿಯಮದಲ್ಲಿ ಕೊಂಚ ಸಡಿಲಿಕೆಯನ್ನು ಮಾಡಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಫ್ಲಾಜಾಗಳಲ್ಲಿ ಶೇಕಡಾ 75ರಷ್ಟು ಲೇನ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ಉಳಿದ ಶೇಕಡಾ 25ರಷ್ಟು ಲೇನ್ ಗಳಲ್ಲಿ ಫಾಸ್ಟ್ ಟ್ಯಾಗ್ನಿಂದ ವಿನಾಯಿತಿ ನೀಡಲಾಗಿದೆ. ಈ ವಿನಾಯಿತಿ 30 ದಿನ  ಅಂದರೆ ಜನವರಿ 15ರವರೆಗೆ ವಿನಾಯಿತಿ ಸಿಗಲಿದೆ.

ಟೋಲ್ ಗಳಲ್ಲಿ ಟ್ರಾಫಿಕ್ ಜಾಮ್

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಒಟ್ಟು 6 ಲೇನ್ ಇದ್ದರೆ ಆಗ 4 ಲೇನ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ. ಫಾಸ್ಟ್ ಟ್ಯಾಗ್ ಇಲ್ಲದೇ ಇರೋರು ಉಳಿದ 2 ಲೇನ್ ಗಳಲ್ಲಿ ಹೋಗಬಹುದು. ಇದರಿಂದ ವಾಹನ ದಟ್ಟಣೆ ಉಂಟಾಗಬಹುದು.

ದಂಡ ಕಟ್ಟುವ ಅಗತ್ಯ ಇಲ್ಲ

ಫಾಸ್ಟ್ ಟ್ಯಾಗ್ ಇಲ್ಲದೇ ಹೋದಲ್ಲಿ ಟೋಲ್ ಮೊತ್ತದ ಎರಡು ಪಟ್ಟು ದಂಡ ಹಾಕುವ ಎಚ್ಚರಿಕೆ ನೀಡಲಾಗಿತ್ತು. ಆದರೆ ಅವಧಿ ವಿಸ್ತರಣೆ ಆಗಿರುವ ಹಿನ್ನೆಲೆಯಲ್ಲಿ ದಂಡ ವಿಧಿಸಿಲ್ಲ.

ಯಾಕೆ ಈ ವಿನಾಯಿತಿ..?

ಫ್ಯಾಸ್ಟ್‌ಟ್ಯಾಗ್‌ನಲ್ಲಿ ಬಳಸಲಾಗುವ ರೇಡಿಯೋ ಸಂವೇದಿ ಗುರುತು ಚಿಪ್‌ನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಆರು ವಾರ ತಗಲುವ ಸಾಧ್ಯತೆ ಇದ್ದು, ಪ್ರತಿ ದಿನಕ್ಕೆ 30 ರಿಂದ 50 ಸಾವಿರ ಚಿಪ್‌ಗಳನ್ನಷ್ಟೇ ಉತ್ಪಾದನೆ ಮಾಡಲಾಗುತ್ತಿದೆ.

ಫಾಸ್ಟ್‌ಟ್ಯಾಗ್‌ ಮಾರುವ ಬ್ಯಾಂಕ್‌ ಮತ್ತು ಇತರೆ ಸಂಸ್ಥೆಗಳಿಗೆ ಟ್ಯಾಗ್‌ಗಳ ಲಭ್ಯತೆಯ ಅಗತ್ಯವಿದ್ದು, ಸದ್ಯಕ್ಕೆ ಮಾರುಕಟ್ಟೆಯಲ್ಲಿ ಕೇವಲ 18 ಲಕ್ಷ ಫಾಸ್ಟ್‌ಟ್ಯಾಗ್‌ ಅಷ್ಟೇ ಲಭ್ಯವಿದೆ.

ರೇಡಿಯೋ ಚಿಪ್‌ಗಳ ಆಮದು ಮತ್ತು ಅವುಗಳ ಆಮದಿನ ಬಳಿಕ ಟ್ಯಾಗ್‌ನಲ್ಲಿ ಅಳವಡಿಸಿ ಪೊರೈಕೆ ಮಾಡಬೇಕಾಗುತ್ತದೆ. ಆದರೆ ಚಿಪ್ ಗಳ ಕೊರತೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಟ್ಯಾಗ್ ಪೂರೈಕೆಯ ಕೊರತೆ ಉಂಟಾಗಿದೆ. ಹೀಗಾಗಿ ಎಲ್ಲರೂ ಫ್ಯಾಸ್ಟ್‌ಟ್ಯಾಗ್‌ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ವಾಹನಗಳ ದಟ್ಟಣೆ ಇರುವ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳ ಲೇನ್ ಗಳ ಪೈಕಿ ಶೇಕಡಾ 25 ರಷ್ಟು ಲೇನ್ ಗಳಲ್ಲಿ ಮಾತ್ರ  ಕ್ಯಾಶ್‌ ಮೂಲಕ ಟೋಲ್‌ ಸಂಗ್ರಹಿಸಲು ಅವಕಾಶ ಮಾಡಿಕೊಡಲಾಗುತ್ತದೆ

ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೆದ್ದಾರಿ ಪ್ರಾಧಿಕಾರಕ್ಕೆ ಬರೆದಿರುವ ಉತ್ತರದಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here