ಸಾಲಬಾಧೆ : ಧಾರವಾಡದಲ್ಲಿ ರೈತ ಆತ್ಮಹತ್ಯೆ

ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ಕೃಷಿಹೊಂಡದಲ್ಲಿ ಬಿದ್ದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದದ ಬಸವೇಶ್ವರ ನಗರದಲ್ಲಿ ನಡೆದಿದೆ.

ಮಾಬುಸಾಬ ಬಸರಕೋಡ ಉರ್ಪ್ (52) ಆತ್ಮಹತ್ಯೆ ಮಾಡಿಕೊಂಡಿರುವ ರೈತ.

ಕೃಷಿಗಾಗಿ ಬ್ಯಾಂಕ್ ಹಾಗೂ ಇತರೆ ಸಂಘಗಳಲ್ಲಿ ಮಾಬುಸಾಬ ಸಾಲವನ್ನು ಪಡೆದಿದ್ದ. ಆದರೆ, ಅತಿವೃಷ್ಟಿಯಿಂದ ಬೆಳೆ ಹಾನಿಯಾದ ಪರಿಣಾಮ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮನನೊಂದು ಮಾಬುಸಾಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸ್ಥಳಕ್ಕೆ ತಹಶೀಲ್ದಾರ್ ಅನೀಲ್ ಬಡಿಗೇರ್, ಪಿಎಸ್ಐ ನವೀನ್ ಜಕ್ಕಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸದ್ಯ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : ಸಿಗದ ನ್ಯಾಯ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಲು ಮರದ ವೀರಾಚಾರಿ ಆತ್ಮಹತ್ಯೆ

LEAVE A REPLY

Please enter your comment!
Please enter your name here