ನಟ ಡಾ.ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ಜೀವಂತ. ಅವರ ಸಿನಿಮಾಗಳ ಮೂಲಕ ಜತೆಗೆ ಅವರು ಮಾಡಿರುವ ಸಾಮಾಜಿಕ ಕಾರ್ಯಗಳ ಮೂಲಕ ಎಂದು ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂಬುದಕ್ಕೆ ಈ ಸನ್ನಿವೇಶವೇ ಸಾಕ್ಷಿ.
ಕೆಲ ದಿನಗಳ ಹಿಂದೆ ಟ್ವಿಟರ್ ಸಂಸ್ಥೆ ಡಾ.ಪುನೀತ್ ರಾಜ್ಕುಮಾರ್ ಖಾತೆಯಿಂದ ಬ್ಲೂ ಟಿಕ್ (ಪರಿಶೀಲಿಸಿದ) ತೆಗೆದು ಹಾಕಿತ್ತು. ಈ ಬಗ್ಗೆ ಅಭಿಮಾನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಬಾಲಿವುಡ್ ನಟ ಸುಶಅಂತ್ ಸಿಂಗ್ ಮರಣವನ್ನಪ್ಪಿ ಹಲವು ದಿನಗಳಾದಾಗ್ಯೂ, ಅವರ ಖಾತೆಯಿಂದ ಬ್ಲೂ ಟಿಕ್ ತೆಗೆದಿರಲಿಲ್ಲ. ಇದರಿಂದ ಕೆರಳಿದ್ದ ಅಭಿಮಾನಿಗಳು ಟ್ವಿಟರ್ ಸಂಸ್ಥೆಗೆ ಮರಳಿ ಬ್ಲೂ ಟಿಕ್ ನೀಡುವಂತೆ ಆಗ್ರಹಿಸಿದ್ದರು. ಇದೀಗ, ಅಭಿಮಾನಿಗಳ ಒತ್ತಾಸೆಗೆ ಮಣಿದಿರುವ ಟ್ವಿಟರ್ ಸಂಸ್ಥೆ ಪುನೀತ್ ರಾಜ್ಕುಮಾರ್ ಖಾತೆಗೆ ಮರಳಿ ಬ್ಲೂ ಟಿಕ್ ಕೊಡಲಾಗಿದೆ.
ಟ್ವಿಟರ್ ಖಾತೆಯನ್ನು ಟ್ವಿಟರ್ ಸೂಚನೆಗಳ ಆಧಾರದ ಮೇಲೆ ಪರಿಶೀಲನೆ ಮಾಡಿಕೊಳ್ಳಬೇಕು. ಪರಿಶೀಲನೆ ( ವೈರಿಫೈಡ್) ಆದ ಖಾತೆಗಳಿಗೆ ಟ್ವಿಟರ್ ಸಂಸ್ಥೆ ಬ್ಲೂ ಟಿಕ್ ನೀಡುತ್ತದೆ. ‘ ಹಾಗೆಯೇ ದೀರ್ಘ ಕಾಲದವೆರೆಗೆ ಆ ಖಾತೆ ಆಕ್ಟೀವ್ ಇಲ್ಲದೇ ಇದ್ದರೆ ಬ್ಲೂ ಟಿಕ್ ಅನ್ನು ತೆಗೆದು ಹಾಕಲಾಗುತ್ತದೆ. ಅದೇ ರೀತಿ ಪುನೀತ್ ರಾಜ್ಕುಮಾರ್ ಖಾತೆಯ ವಿಚಾರದಲ್ಲಿ ಆಗಿತ್ತು.
ಡಾ.ಪುನೀತ್ ರಾಜ್ಕುಮಾರ್ ಅವರ ಖಾತೆಗೆ ಬ್ಲೂ ಟಿಕ್ ಮರಳಿ ಬಂದ ಬಗ್ಗೆ ನಿರ್ದೇಶಕ ಸಂತೋಷ್ ನಂದ್ ರಾಮ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇದು ಅಪ್ಪು ಅಭಿಮಾನಿಗಳ ಶಕ್ತಿಯಘಾಇದೆ. ಟ್ವಿಟರ್ ಸಂಸ್ಥೆಗೆ ಧನ್ಯವಾದಗಳು ಎಂದಿದ್ದಾರೆ.
Thank you ❤️@verified @Twitter @TwitterIndia for the Verification @PuneethRajkumar Appu Anna is alive in People Heart & this is one of the example😍 Thank you Powerfull Fans of The Powerfull Man💪💪💪 love u Puneethians🤗🤗🤗 This is a Good note to start the week 🙌🙌 pic.twitter.com/OdMCPBGiKE
— Santhosh Ananddram (@SanthoshAnand15) July 18, 2022