Raju Srivatsav Death : ಖ್ಯಾತ ಹಾಸ್ಯ ನಟ ರಾಜು ಶ್ರೀವಾತ್ಸವ್ ಇನ್ನಿಲ್ಲ

Raju Srivastav death

ಬಾಲಿವುಡ್​ನ ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್ (58) ಇಂದು ಮರಣವನ್ನಪ್ಪಿದ್ದಾರೆ (Raju Srivatsav Death). ಈ ಬಗ್ಗೆ ಕುಟುಂಬಸ್ಥರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಜಿಮ್ ಮಾಡುವಾಗ ಎದೆಯ ನೋವಿನಿಂದ ಕುಸಿದು ಬಿದ್ದಿದ್ದ ಇವರನ್ನು ಅಗಸ್ಟ್​ 10 ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಅಂದೇ ಇವರಿಗೆ ಆ್ಯಂಜಿಯೋಪ್ಲಾಸ್ಟಿ ಅಪರೇಷನ್ ಮಾಡಲಾಗಿತ್ತು.

ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿಯ ರಾಜು ಶ್ರೀವಾತ್ಸವ್ (Raju Srivatsav Death) ಪರಿಸ್ಥಿತಿ ತುಂಬಾ ಕ್ರಿಟಿಕಲ್ ಆಗಿದೆ ಎಂದು ತಿಳಿದುಬಂದಿತ್ತು. 41 ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ನಿರಂತರವಘಾಇ ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನೂ ಓದಿ : BIG BREAKING ಹೃದಯಾಘಾತದಿಂದ ಸಚಿವ ಉಮೇಶ್​ ಕತ್ತಿ ನಿಧನ

ಶ್ರೀವಾಸ್ತವ ಅವರು 1980 ರ ದಶಕದ ಉತ್ತರಾರ್ಧದಿಂದ ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು 2005 ರಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಶೋ “ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್” ನ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ ನಂತರ ಹೆಚ್ಚಿನ ಜನ ಮನ್ನಣೆಯನ್ನು ಪಡೆದರು.

ರಾಜು ಶ್ರೀವಾತ್ಸವ್ ‘ಮೈನೆ ಪ್ಯಾರ್ ಕಿಯಾ’, ‘ಆಮ್ದಾನಿ ಅತ್ತನ್ನಿ ಖರ್ಚಾ ರುಪೈಯಾ’ ಮತ್ತು ‘ಮೈ ಪ್ರೇಮ್ ಕಿ ದೀವಾನಿ ಹೂನ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Please enter your comment!
Please enter your name here