ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೆಸರಲ್ಲಿ ನಕಲಿ ವೆಬ್ಸೈಟ್ ಸೃಷ್ಟಿಸಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒಳಗೊಂಡಂತೆ ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಮಾಹಿತಿಗಳನ್ನು ಪ್ರಕಟಿಸಿದ್ದ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
ಬೆಂಗಳೂರು ಮತ್ತು ಹಾಸನದಲ್ಲಿ ಕೈಗೊಂಡ ದಾಳಿಯಲ್ಲಿ ವೆಟ್ ಫ್ಯಾಬ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೂವರು ನಿರ್ದೇಶಕರು ಮತ್ತು ಓರ್ವ ಉದ್ಯೋಗಿಯನ್ನು ಬಂಧಿಸಲಾಗಿದೆ.
ಮೂರು ಮೊಬೈಲ್ ಫೋನ್, ಒಂದು ಲ್ಯಾಪ್ಟ್ಯಾಪ್ ಮತ್ತು ಕೆಲವು ಅವಹೇಳನಕಾರಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ವೆಬ್ಸೈಟ್ ನಿರ್ಮಾಣಕ್ಕಾಗಿ ಹಣ ಸಂದಾಯ ಮಾಡಿದ್ದ ಧರಣೇಶ್ ಜೈನ್ ಮತ್ತು ನಕಲಿ ಐಡಿ ಸೃಷ್ಟಿಸಿ ಕಾಂಗ್ರೆಸ್ ಪಕ್ಷದ ಹೆಸರಲ್ಲಿ ನಕಲಿ ವೆಬ್ಸೈಟ್ ಅಭಿವೃದ್ಧಿಪಡಿಸಿದ್ದ ಸಿದ್ಧಾರ್ಥ್ ಮತ್ತು ವೆಂಕಟೇಶ್ ಎಂಬ ಮೂವರನ್ನು ಬಂಧಿಸಲಾಗಿದೆ.
ಬಿಜೆಪಿ ನಂಟು:
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ರಣತಂತ್ರಗಳನ್ನು ರೂಪಿಸುತ್ತಿದ್ದ ವರಾಹಿ ಎನಾಲಿಟಿಕಲ್ ಕಂಪನಿಯ ಹಾಸನ ಮೂಲದ ಶಶಾಂಕ್ ಭಾರಧ್ವಜ್ ಓಡಿಹೋಗಿದ್ದು, ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಘಟಕದ ಹೆಸರಲ್ಲಿ ನಕಲಿ ವೆಬ್ಸೈಟ್ ಸಂಬಂಧ ಫೆಬ್ರವರಿ ಮೂರರಂದು ಕೆಪಿಸಿಸಿ ಕಾನೂನು ಘಟಕ ದೂರನ್ನು ನೀಡಿತ್ತು. ಈ ದೂರು ಆಧರಿಸಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 66 (ಸಿ) ಮತ್ತು 66 (ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ನಕಲಿ ವೆಬ್ಸೈಟ್ಗಾಗಿ ಶಶಾಂಕ್ ಭಾರಧ್ವಜ್ 25 ಸಾವಿರ ರೂಪಾಯಿ ಹಣ ಸಂದಾಯ ಮಾಡಿದ್ದ ಮತ್ತು ಕಮಿಷನ್ ಪಡೆದಿದ್ದ.
ADVERTISEMENT
ADVERTISEMENT