ದೇಶದಲ್ಲಿ ಚಲಾವಣೆಯಲ್ಲಿರುವ ನಗದಿನಲ್ಲಿ 500 ರೂಪಾಯಿ ನೋಟುಗಳ ಪಾಲು ಶೇಕಡಾ 77ಕ್ಕಿಂತ ಹೆಚ್ಚಿದೆ. ಈ ನೋಟುಗಳಲ್ಲಿ ನಕಲಿ ನೋಟುಗಳು ಪ್ರತಿವರ್ಷ ಹೆಚ್ಚುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ಬ್ಯಾಂಕ್ಗಳಲ್ಲಿ ಕಾಣಸಿಗುತ್ತಿರುವ 500 ರೂ. ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ ಕಳೆದ ಎರಡು ವರ್ಷದಲ್ಲಿ ಶೇಕಡಾ 130ರಷ್ಟು ಹೆಚ್ಚಿದೆ.
2022-23ರ ಸಾಲಿನಲ್ಲಿ 2,23,769 ನಕಲಿ ಕರೆನ್ಸಿ ನೋಟುಗಳನ್ನು ಬ್ಯಾಂಕುಗಳ ಮಟ್ಟದಲ್ಲಿ ಗುರುತಿಸಲಾಗಿದೆ. ಇದರಲ್ಲಿ ರಿಸರ್ವ್ ಬ್ಯಾಂಕ್ ಮಟ್ಟದಲ್ಲಿ ಶೇಕಡಾ 4.6ರಷ್ಟನ್ನು, ಇತರೆ ಬ್ಯಾಂಕ್ಗಳಲ್ಲಿ ಶೇಕಡಾ 95.4ರಷ್ಟು ನೋಟುಗಳನ್ನು ಗುರುತಿಸಲಾಗಿದೆ.
2021-22ರ ಸಾಲಿಗೆ ಹೋಲಿಕೆ ಮಾಡಿದಲ್ಲಿ 20 ರೂಪಾಯಿ ಮುಖಬೆಲೆಯ 8.4%, 500 ರೂ. ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ 14.4% ಹೆಚ್ಚಿದೆ.
ಇದೇ ಸಂದರ್ಭದಲ್ಲಿ 10 ರೂ.ನೋಟುಗಳಲ್ಲಿ 11.6%, 100 ರೂ. ನೋಟುಗಳಲ್ಲಿ 14.7%, 2000 ರೂ.ನೋಟುಗಳಲ್ಲಿ 27.9% ನಕಲಿ ನೋಟುಗಳ ಸಂಖ್ಯೆ ಕಡಿಮೆ ಆಗಿದೆ.
ಸಿಕ್ಕಿಬಿದ್ದ 500 ರೂ.ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ
# 2020-21 – 39,453
# 2021-22 – 79,669
# 2022-23 – 91,110
ದೇಶದ ಆರ್ಥಿಕ ವ್ಯವಸ್ಥೆಯಲ್ಲಿ 2000 ರೂ. ನೋಟುಗಳ ಪಾಲು ಮಾರ್ಚ್ ಕೊನೆಯ ಹೊತ್ತಿಗೆ 1.3%ಗೆ ಇಳಿದಿದೆ. ಮೌಲ್ಯದ ಲೆಕ್ಕದಲ್ಲಿ ನೋಡಿದರೇ 10.8%ಕ್ಕೆ ಇಳಿದೆ.
ADVERTISEMENT
ADVERTISEMENT