ಅಧಿಕಾರಿಗಳಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರು ನಕಲಿ ಎಸಿಬಿ ಅಧಿಕಾರಿಗಳನ್ನು ಕೋಲಾರ ಗ್ರಾಮಾಂತರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬೆಳಗಾವಿಯ ಮುರಿಗಪ್ಪ, ಹಾಸನ ಜಿಲ್ಲೆ ಸಕಲೇಶಪುರದ ರಜನಿಕಾಂತ್ ಹಾಗೂ ಮಹಾರಾಷ್ಟ್ರದ ರಾಜೇಶ್ ಬಂಧಿತ ಆರೋಪಿಗಳು. ಇವರನ್ನು ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಎಸಿಬಿ ಅಧಿಕಾರಿಗಳು ಎಂದು ಹೇಳಿಕೊಂಡ ಈ ಮೂವರು ಕೋಲಾರದ ನಿರ್ಮಿತಿ ಕೇಂದ್ರದ ಯೋಜನಾ ಅಧಿಕಾರಿ ನಾರಾಯಣಗೌಡ ಅವರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅನುಮಾನಗೊಂಡ ನಾರಾಯಣಗೌಡ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಈ ಮೂವರು ಆರೋಪಿಗಳ ವಿರುದ್ಧ ಇಂಥದ್ದೇ ಹಲವು ಪ್ರಕರಣಗಳು ವಿವಿಧೆಡೆ ದಾಖಲಾಗಿವೆ.