ಮಂಗಳೂರು ಮೂಲದ ವ್ಯಕ್ತಿ ಹೆಸರಲ್ಲಿ ನಕಲಿ ಖಾತೆ: Facebookಗೆ ಹೈಕೋರ್ಟ್​ ಛೀಮಾರಿ

ಮಂಗಳೂರು ಮೂಲದ ವ್ಯಕ್ತಿಯೊಬ್ಬರ ಹೆಸರಲ್ಲಿ ನಕಲಿ ಫೇಸ್​ಬುಕ್​ ಖಾತೆ ಸೃಷ್ಟಿಸಿದ್ದರ ಸಂಬಂಧ ತನಿಖೆಗೆ ಸಹಕರಿಸದೇ ಹೋದರೆ ಭಾರತದಲ್ಲಿ ಫೇಸ್​ಬುಕ್​ನ ಚಟುವಟಿಕೆಯನ್ನೇ ನಿಲ್ಲಿಸುವಂತೆ ಆದೇಶ ಕೊಡಬೇಕಾದಿತು ಎಂದು ಕರ್ನಾಟಕ ಹೈಕೋರ್ಟ್​ ಫೇಸ್​ಬುಕ್​ಗೆ ಎಚ್ಚರಿಕೆ ನೀಡಿದೆ.

ಫೇಸ್​ಬುಕ್​ ಪೋಸ್ಟ್​ವೊಂದರ ಸಂಬಂಧ ಮಂಗಳೂರು ಮೂಲದ ಶೈಲೇಶ್​ ಕುಮಾರ್​ ಅವರು ಸೌದಿ ಜೈಲಿನಲ್ಲಿದ್ದಾರೆ. ಅದು ಶೈಲೇಂದ್ರ ಕುಮಾರ್​ ಅವರ ಖಾತೆಯಲ್ಲ, ಅವರ ಹೆಸರಲ್ಲಿ ಯಾರೋ ಸೃಷ್ಟಿಸಿರುವ ನಕಲಿ ಖಾತೆ ಎನ್ನುವುದು ಶೈಲೆಂದ್ರ ಅವರ ಪತ್ನಿಯ ವಾದ.

ಶೈಲೇಂದ್ರ ಕುಮಾರ್​ ಅವರಿಗೆ ನೀಡಲಾಗುತ್ತಿರುವ ನೆರವು ಮತ್ತು ಸೌದಿಯಲ್ಲಿ ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಯುತ್ತಿದೆ ಎಂಬ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್​ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.