ಮಾನ್ಯ ಮುಖ್ಯಮಂತ್ರಿಗಳ ನಿದ್ದೆ ಬಿಡಿಸಬೇಕಾದರೆ ನಾವು ಎಚ್ಚರಿಸಬೇಕಾಯಿತು ಎಂದಿರುವ ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶಾಲಾ ಮಕ್ಕಳಿಗೆ ಶೂ, ಸಾಕ್ಸ್ಗೆ ಹಣ ನೀಡದೇ ಕಾಡಿಸಿದ್ದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬಡ ಶಾಲಾ ಮಕ್ಕಳಿಂದ ಶೂ-ಸಾಕ್ಸ್ಗಳನ್ನೂ ಕಿತ್ತುಕೊಳ್ಳಲು ಹೊರಟಿದ್ದ ಮನುಷ್ಯತ್ವವೇ ಇಲ್ಲದ ಅವಿವೇಕಿ ಶಿಕ್ಷಣ ಸಚಿವರಾದ ಬಿಸಿ ನಾಗೇಶ್
ಮಾಡುತ್ತಿರುವ ಎಡವಟ್ಟುಗಳು ಒಂದೋ, ಎರಡೋ..? ಮೊದಲು ಈ ಶಿಕ್ಷಣ ವಿರೋಧಿಯನ್ನು ಸಂಪುಟದಿಂದ ಕಿತ್ತು ಹಾಕಿ
ಎಂದು ಶಾಲೆಗಳನ್ನು ಉಳಿಸಿ ಹೆಸರಲ್ಲಿ ಸಿದ್ದರಾಮಯ್ಯ ಅವರು ಟ್ವೀಟಿಸಿದ್ದಾರೆ.
ಶಾಲೆಗಳಿಗೆ ಮಕ್ಕಳು ಬರುವುದು ಶಿಕ್ಷಣಕ್ಕೋ ಅಥವಾ ಶೂ, ಸಾಕ್ಸ್ಗೋ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದ ಶಿಕ್ಷಣ ಸಚಿವರ ವಿರುದ್ಧ ಕಿಡಿಕಾರಿದ್ದ ಕಾಂಗ್ರೆಸ್ ಭಿಕ್ಷೆ ಎತ್ತಿಯಾದರೂ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡುವುದಾಗಿ ಎಚ್ಚರಿಸಿತ್ತು.
ಕಾಂಗ್ರೆಸ್ ನೀಡಿದ್ದ ಈ ಎಚ್ಚರಿಕೆಯ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ನೀಡುವ ಯೋಜನೆಗೆ 132 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.