ಐಪಿಎಲ್ ಮಾಜಿ ಮುಖ್ಯಸ್ಥ ಮತ್ತು ಉದ್ಯಮಿ ಲಲಿತ್ ಮೋದಿ ಅವರು ಬಾಲಿವುಡ್ ನಟಿ ಸುಷ್ಮಿತಾ ಸೇನ್ ಜೊತೆಗೆ ಮದುವೆ ಆಗಿದ್ದಾರೆ ಎಂಬ ವರದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಾವಿಬ್ಬರು ಮದುವೆ ಆಗಿಲ್ಲ, ಡೇಟಿಂಗ್ನಲ್ಲಷ್ಟೇ ಇದ್ದೇವೆ ಎಂದು ಲಲಿತ್ ಮೋದಿ ಸ್ಪಷ್ಟನೆ ಕೊಟ್ಟಿದ್ದಾರೆ.
ಸದ್ಯ ಲಲಿತ್ ಮೋದಿ ಲಂಡನ್ನಲ್ಲಿ ನೆಲೆಸಿದ್ದಾರೆ. ಹಣಕಾಸು ಹಗರಣಗಳು ಬಯಲಾದ ಬಳಿಕ ಅವರು 2010ರಲ್ಲಿ ಭಾರತದಿಂದ ಲಂಡನ್ಗೆ ತೆರಳಿ ಅಲ್ಲಿ ನೆಲೆಸಿದ್ದಾರೆ.
ಮಾರಿಷಸ್ ಒಳಗೊಂಡಂತೆ ವರ್ಲ್ಡ್ ಟೂರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಲಲಿತ್ ಮೋದಿ, ತಮ್ಮ ಅರ್ಧಾಂಗಿ ಎಂದು ಸುಷ್ಮಿತಾ ಸೇನ್ ಅವರನ್ನು ಉಲ್ಲೇಖ ಮಾಡಿ ಹೊಸ ಆರಂಭದ ಶುರುವಾಗಿದೆ ಎಂದು ಬರೆದುಕೊಂಡಿದ್ದಾರೆ.
46 ವರ್ಷದ ಸುಷ್ಮಿತಾ ಸೇನ್ ಮದುವೆಯಾಗಿಲ್ಲ. ಇಬ್ಬರು ಮಕ್ಕಳನ್ನು ಈಕೆ ದತ್ತು ಪಡೆದಿದ್ದಾರೆ. 2018ರಿಂದ 2021ರವರೆಗೆ ಸೇನ್ ಅವರು ರೋಹ್ಮನ್ ಶಾಲ್ ಎಂಬವರ ಜೊತೆಗೆ ಸಂಬಂಧದಲ್ಲಿದ್ದರು.