ಮಾಜಿ ಉಪಮುಖ್ಯಮಂತ್ರಿ ಹಾಗೂ ಪರಿಷತ್ ಸದಸ್ಯ ಲಕ್ಷ್ಮಣ ಸವದಿ (Lakshman Savadi) ಅವರ ಕಾರು ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಹಾರೂಗೇರಿ ಕ್ರಾಸ್ ಬಳಿ ಪಲ್ಟಿ ಆಗಿದ್ದು, ಸವದಿ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬುಧವಾರ ಮಧ್ಯಾಹ್ನ ಅಥಣಿಯಿಂದ ಗೋಕಾಕ್ ಮಾರ್ಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಾರೋಗೇರಿ ಕ್ರಾಸ್ ಬಳಿ ಇರುವ ಏಕಲವ್ಯ ಕಾಲೇಜು ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ ಸಂಭವಿಸಿದೆ.
ರಸ್ತೆ ಮಧ್ಯೆ ಬೈಕ್ ಸವಾರರು ಏಕಾಏಕಿ ಎದುರಿಗೆ ಬಂದಾಗ, ಅಪಘಾತ ತಪ್ಪಿಸಲು ಹೋಗಿ ಚಾಲಕ ಪಕ್ಕದಲ್ಲಿರುವ ರಸ್ತೆಯಲ್ಲಿ ಕಾರನ್ನು ತೆಗೆದುಕೊಂಡ. ಈ ವೇಳೆ ಕಾರು ನಿಯಂತ್ರಣ ತಪ್ಪಿ ಘಟಪ್ರಭಾ ಎಡದಂಡೆ ಕಾಲುವೆಗೆ ಪಲ್ಟಿಯಾಗಿದೆ.
ಇದನ್ನೂ ಓದಿ : ತುಮಕೂರಿನಲ್ಲಿ ಅಪಘಾತ: ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ
ಈ ಸಂದರ್ಭದಲ್ಲಿ ಲಕ್ಷ್ಮಣ ಸವದಿ (Lakshman Savadi) ಅವರು ಕಾರಿನಲ್ಲಿ ಇದ್ದರು. ಘಟನೆಯಲ್ಲಿ ಸವದಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಯಾವುದೇ ರೀತಿಯ ಗಂಭೀರ ಸ್ವರೂಪದ ಗಾಯಗಳು ಆಗಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯರ ಸಹಾಯದಿಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಕಾರ್ ಚಾಲಕನನ್ನು ಅಪಫಾತಕ್ಕೀಡಾದ ಕಾರಿನಿಂದ ಹೊರಗೆ ಸುರಕ್ಷಿತವಾಗಿ ತೆಗೆಯಲಾಗಿದೆ.