ಮಾಜಿ ಸಿಎಂ ಸಿದ್ದರಾಮಯ್ಯಗೆ ಹೃದಯ ಚಿಕಿತ್ಸೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರಾಗಿದ್ದು ಎದೆನೋವಿನ ಹಿನ್ನೆಲೆಯಲ್ಲಿ ಬೆಂಗಳೂರಿನ ನಾರಾಯಣ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಹಿಂದೆಯೇ ಸಿದ್ದರಾಮಯ್ಯಗೆ ಹೃದಯ ಸಮಸ್ಯೆ ಇತ್ತು. ಇಪ್ಪತ್ತು ವರ್ಷಗಳ ಹಿಂದೆ ಆಂಜಿಯೋಗ್ರಾಂ ಮಾಡಲಾಗಿತ್ತು. ಕೆಲ ದಿನಗಳಿಂದ ಎದೆನೋವು ಕಾಣಿಸಿಕೊಂಡಿತ್ತು. ಮಧ್ಯಾಹ್ನ ಮತ್ತೆ ಆಂಜಿಯೋಪ್ಲಾಸ್ಟ್‌ ಮಾಡಲಾಗಿದೆ. ಹಿಂದೆ ಮಾಡಿದ್ದ ರಕ್ತನಾಳ ಸಣ್ಣವಾಗಿತ್ತು. ಈಗ ಆರೋಗ್ಯ ಸ್ಥಿರವಾಗಿದೆ. ಸಂಜೆ ಡಿಸ್ಚಾರ್ಜ್ ಮಾಡಲಾಗುತ್ತದೆ. ಆಂಜಿಯೋ ಪ್ಲಾಸ್ಟ್‌ ಮಾಡಿದ್ದರಿಂದ ಒಂದು ದಿನ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಅಧಿಕ ರಕ್ತದೊತ್ತಡ ಮತ್ತು ಎದೆನೋವು ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ಮಾಧ್ಯಮಗಳ ವರದಿಯನ್ನು ಅಲ್ಲಗಳೆದಿರುವ ಮಾಜಿ ಸಿಎಂ,

ನಾನು ಆರೋಗ್ಯವಾಗಿದ್ದೀನಿ. ಗಾಳಿ ಸುದ್ದಿಗೆ ಆತಂಕ ಬೇಡ ಎಂದು ಟ್ವೀಟ್‌ ಮಾಡಿದ್ದಾರೆ.

LEAVE A REPLY

Please enter your comment!
Please enter your name here