`ಆತ್ಮಹತ್ಯೆ ಮಾಡ್ಕೊಂಡ್ರಾ..? ಯಾಕೆ’ – ಇದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪಂಚಾಯತ್ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಕೊಟ್ಟ ಮೊದಲ ಪ್ರತಿಕ್ರಿಯೆ.
ಮೈಸೂರಲ್ಲಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ
`ಅವರು (ಗುತ್ತಿಗೆದಾರ ಸಂತೋಷ್ ಪಾಟೀಲ್) ಆರೋಪ ಮಾಡಿದಗೋಸ್ಕರ ನಾನು ಅವರಿಗೆ ಕೇಸ್ ಹಾಕಿದ್ದೆ. ಆ ಕೇಸ್ ಅಡ್ಮಿಟೂ ಆಗಿತ್ತು. ಇಷ್ಟು ಮಾತ್ರ ನನಗೆ ಗೊತ್ತು. ಆತ್ಮಹತ್ಯೆ ಮಾಡ್ಕೊಂಡಿದ್ದನ್ನು ನಿಮ್ಮ ಬಾಯಿಂದಲೇ ನಾನು ಕೇಳ್ತಿರೋದು. ಯಾಕೆ ಅಂತ ನನಗೆ ಗೊತ್ತಿಲ್ಲ. ಅವರು ಏನ್ ಡೆತ್ ನೋಟ್ ಬರೆದಿದ್ದಾರೋ ನನಗೆ ಗೊತ್ತಿಲ್ಲ. ಯಾಕೆ ಆರೋಪ ಮಾಡಿದ್ರೋ ಇದ್ಯಾವುದೂ ನನಗೆ ಗೊತ್ತಿಲ್ಲ. ಅವರಿಗೇ ಕೇಳ್ಬೇಕು. ಅವರಿಗೆ ಕೇಳುವುದಕ್ಕೂ ಅಲ್ಲ ಅವರಿಗಾ. ನನಗೆ ಏನೋ ಗೊತ್ತಿಲ್ಲ, ಸಬ್ಜೆಕ್ಟೇ ಗೊತ್ತಿಲ್ಲ, ನಾನು ಏನು ಉತ್ತರ ಕೊಡಲಿ. ನನಗೆ ಏನೂ ಐಡಿಯಾ ಇಲ್ಲ’
ಎಂದು ಮೈಸೂರಲ್ಲಿ ಸಚಿವ ಈಶ್ವರಪ್ಪ ಹೇಳಿದ್ದಾರೆ.