ಭಾರತದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 246 ರನ್ಗೆ ಆಲೌಟ್ ಆಗಿದೆ.
ಇನ್ನೂ ಒಂದು ಓವರ್ ಬಾಕಿ ಇರುವಂತೆ 49 ಓವರ್ಗೆ 246 ರನ್ಗೆ ಆಂಗ್ಲರು ಎಲ್ಲ ವಿಕೆಟ್ ಕಳೆದುಕೊಂಡರು.
ಇಂಗ್ಲೆಂಡ್ ಪರ ಮೋಯಿಲ್ ಅಲಿ 41 ಮತ್ತು ಡೇವಿಡ್ ವಿಲ್ಲಿ 47 ರನ್ ಗಳಿಸಿದರು.
ಭಾರತದ ಪರ ಯುಜುವೇಂದ್ರ ಚಾಹಲ್ 4 ವಿಕೆಟ್, ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯಾ ತಲಾ 2 ವಿಕೆಟ್ ಪಡೆದರು.
ಭಾರತ ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಮುನ್ನಡೆಯಲಿದೆ. ಇವತ್ತು ಗೆದ್ದರೆ ಸರಣಿ ಭಾರತದ ಕೈವಶ ಆಗಲಿದೆ.