ಗುರುವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5 ರಷ್ಟು ತೀವ್ರತೆ ದಾಖಲಾಗಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯ ವರದಿಯಾಗಿಲ್ಲ.
ಗುರುವಾರ ಬೆಳಿಗ್ಗೆ 5.35ರ ಸುಮಾರಿಗೆ ಭೂಕಂಪನ ಸಂಭವಿಸಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಭೂಕಂಪನದ ಕೇಂದ್ರಬಿಂದು ತಜಕಿಸ್ತಾನದ ಗೊರ್ನೊ-ಬದಕ್ಷನ್ ಪ್ರದೇಶದಲ್ಲಿದೆ.
ಭೂಮಿಯ ಒಳಪದರದ 108 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ’ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶ್ರೀನಗರ ಮತ್ತು ಕಣಿವೆಯ ಇತರ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ.
ಕಾಶ್ಮೀರವು ಭೂಕಂಪನ ಸೂಕ್ಷ್ಮ ಪ್ರದೇಶವಾಗಿದ್ದು, ಅಕ್ಟೋಬರ್ 8, 2005ರಂದು ಸಂಭವಿಸಿದ ಭೂಕಂಪದಿಂದ ನಿಯಂತ್ರಣ ರೇಖೆಯ (ಎಲ್ಒಸಿ) ಎರಡು ಬದಿಗಳಲ್ಲಿ 80,000ಕ್ಕೂ ಹೆಚ್ಚು ಜನರು ಸಾವೀಗೀಡಾಗಿದ್ದರು. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆಯು 7.6ರಷ್ಟಿತ್ತು.