ಇ-ಸ್ಕೂಟರ್​​ಗಳ ಖರೀದಿಗೆ ಸಬ್ಸಿಡಿ ಕಡಿತ ಸಾಧ್ಯತೆ

ಎಲೆಕ್ಟ್ರಿಕ್​ ಸ್ಕೂಟರ್​ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಇಂಗ್ಲೀಷ್​ ದೈನಿಕ ಎಕಾನಮಿಕ್​ ಟೈಮ್ಸ್​ ವರದಿ ಮಾಡಿದೆ.

ಇ-ಸ್ಕೂಟರ್​ ಖರೀದಿ ಮೇಲೆ ಈಗ ನೀಡಲಾಗುತ್ತಿರುವ ಶೇಕಡಾ 40ರಷ್ಟು ಸಬ್ಸಿಡಿಯನ್ನು ಶೇಕಡಾ 15ಕ್ಕೆ ಇಳಿಸುವ ಬಗ್ಗೆ ಬೃಹತ್​ ಕೈಗಾರಿಕೆಗಳ ಸಚಿವಾಲಯದ ಸಚಿವರ ಉನ್ನತ ಮಟ್ಟದ ತಂಡಕ್ಕೆ ಶಿಫಾರಸ್ಸು ಕಳುಹಿಸಿದೆ ಎಂದು ವರದಿಯಾಗಿದೆ.

ಇ-ಸ್ಕೂಟರ್​​ ಮಾರಾಟ ಹೆಚ್ಚಿಸುವ ಸಲುವಾಗಿ ಮತ್ತು ಅದರ ಸಲುವಾಗಿ ಹೆಚ್ಚಿನ ಗ್ರಾಹಕರಿಗೆ ಸಬ್ಸಿಡಿ ಸಿಗುವಂತೆ ಮಾಡುವ ಸಲುವಾಗಿ ಸಬ್ಸಿಡಿ ಮೊತ್ತವನ್ನೇ ಕಡಿತಗೊಳಿಸಿ ಸಬ್ಸಿಡಿ ಲಾಭ ಪಡೆಯುವವರ ಸಂಖ್ಯೆ ಹೆಚ್ಚಿಸುವ ಬಗ್ಗೆ ಶಿಫಾರಸ್ಸು ಮಾಡಲಾಗಿದೆ.

ಒಬ್ಬರಿಗೆ ನೀಡಲಾಗುವ ಪ್ರೋತ್ಸಾಹಧನ ಮೊತ್ತ ಕಡಿತದಿಂದ ಹೆಚ್ಚಿನ ಗ್ರಾಹಕರಿಗೆ ಪ್ರೋತ್ಸಾಹಧನ ವಿತರಿಸಬಹುದು ಎನ್ನುವುದು ಸರ್ಕಾರದ ಉದ್ದೇಶ.

ಇ-ಸ್ಕೂಟರ್​ ಖರೀದಿಗೆ ಪ್ರೋತ್ಸಾಹಧನ ನೀಡುವ ಸಲುವಾಗಿ ಕೇಂದ್ರ ಸರ್ಕಾರ 3 ಸಾವಿರ ಕೋಟಿ ರೂಪಾಯಿ ತೆಗೆದಿಟ್ಟಿದೆ. ಇ-ಕಾರುಗಳ ಖರೀದಿಗೆ ಪ್ರೋತ್ಸಾಹಧನದ ಭಾಗವಾಗಿ 1 ಸಾವಿರ ಕೋಟಿ ರೂಪಾಯಿ ತೆಗೆದಿಟ್ಟಿದೆ.