ಅವನಿಗೆ ಎಣ್ಣೆ ಇಲ್ಲ ಅಂದ್ರೆ ಒಂದು ತುತ್ತು ಕೂಡಾ ಒಳಗೆ ಇಳಿಯಲ್ಲ.. ಇದು ಕುಡುಕರ ವಿಚಾರದಲ್ಲಿ ಕೇಳಿಬರುವ ಕಾಮನ್ ಪಾಯಿಂಟ್.. ಆದ್ರೆ ಇಲ್ಲೊಂದು ಕೋಳಿ ಹುಂಜಕ್ಕೆ ಎಣ್ಣೆ ಇರ್ಲೇ ಬೇಕು.. ಎಣ್ಣೆ ಕೊಟ್ಟಿಲ್ಲ ಅಂದ್ರೆ ಏನು ತಿನ್ನೋದೇ ಇಲ್ಲ. ಕಡೆಗೆ ನೀರು ಕುಡಿಯೋದೇ ಇಲ್ಲ.
ಮದ್ಯದ ದಾಸನಾದ ಕೋಳಿ ಹುಂಜ ಇರೋದು ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಪಿಪ್ರಿ ಎಂಬಲ್ಲಿ. ಗ್ರಾಮದ ಭಾವು ಖಾತೋರೆಗೆ ಕೋಳಿ ಸಾಕುವ ಖಾಯಾಲಿ. ಹೀಗೆ ಸಾಕಿದ ಕೋಳಿ ಹುಂಜ ಕುಟುಂಬಸ್ಥರ ಪಾಲಿಗೆ ಅಚ್ಚುಮೆಚ್ಚು.
ಇತ್ತೀಚಿಗೆ ಹುಂಜ ಅನಾರೋಗ್ಯಕ್ಕೆ ತುತ್ತಾದಾಗ, ಎಷ್ಟೇ ಚಿಕಿತ್ಸೆ ಕೊಟ್ಟರೂ ಪ್ರಯೋಜನ ಆಗಲಿಲ್ಲ.ಈಗಲೂ ಆಗಲೋ ಎನ್ನುವಂತಿತ್ತು.ಕೊನೆಗೆ ಗ್ರಾಮಸ್ಥರೊಬ್ಬರು, ಹುಂಜಕ್ಕೆ ಲೋಕಲ್ ಮದ್ಯ ಕೊಡು ಸರಿ ಹೋಗುತ್ತೆ ಎಂದರಂತೆ. ಆದರೇ ಎಲ್ಲೂ ಲೋಕಲ್ ಎಣ್ಣೆ ಸಿಗದ ಹಿನ್ನೆಲೆಯಲ್ಲಿ ಯಲ್ಲಿ ವೈನ್ ಶಾಪ್ ಗೆ ಹೋದ ಭಾವು, ಎಣ್ಣೆ ಬಾಟಲಿ ತಂದು ಕೋಳಿ ಹುಂಜಕ್ಕೆ ಕುಡಿಸಿದರು.
ಎರಡೇ ದಿನದಲ್ಲಿ ಹುಂಜನೂ ಚೇತರಿಸಿಕೊಳ್ತು. ಆದರೇ, ಮದ್ಯಪಾನ ಎಂಬ ದುಶ್ಚಟಕ್ಕೆ ಹುಂಜ ಬಿತ್ತು. ಈಗ ದಿನ ಬೆಳಗಾದ್ರೆ ಹುಂಜಕ್ಕೆ ಎಣ್ಣೆ ಇರ್ಲೇಬೇಕು. ಎಣ್ಣೆ ಕೊಟ್ಟಿಲ್ಲ ಅಂದರೆ ಈ ಹುಂಜ ಆಹಾರ ಸೇವಿಸಲ್ಲ. ನೀರು ಕೂಡಾ ಕುಡಿಯಲ್ಲ.
ಸದ್ಯ ಮಾಲೀಕ ಭಾವು, ಹುಂಜಕ್ಕೆ ಎಣ್ಣೆ ಕುಡಿಸಲು ತಿಂಗಳಿಗೆ ಎರಡು ಸಾವಿರ ರೂಪಾಯಿ ಖರ್ಚು ಮಾಡ್ತಾ ಇದಾರೆ. ಎಣ್ಣೆ ಬಿಡಿಸಬೇಕು. ಏನಾದ್ರೂ ಮಾರ್ಗ ಹೇಳಿ ಎಂದು ಮಾಲೀಕ ಭಾವು ಕೇಳ್ತಾ ಇದ್ದಾರೆ.