ಮಳೆಗಾಲದಲ್ಲಿ ಪಾನಿಪುರಿ ತಿನ್ನುವುದನ್ನು ಸಾಧ್ಯವಾದಷ್ಟು ಕಮ್ಮಿ ಮಾಡಿ, ಮಳೆಗಾಲದಲ್ಲಿ ಪಾನಿಪುರಿ ತಿನ್ನುತ್ತಿರುವುದಿಂದ ಹೆಚ್ಚಿನ ಜನರಲ್ಲಿ ಟೈಫಾಯ್ಡ್ ಜ್ವರ ಕಾಣಿಸಿಕೊಳುತ್ತಿದೆ ಎಂದು ತೆಲಂಗಾಣ ರಾಜ್ಯದ ಸಾರ್ವಜನಿಕ ಆರೋಗ್ಯದ ನಿರ್ದೇಶಕ ಡಾ ಶ್ರೀನಿವಾಸ್ ರಾವ್ ಹೇಳಿದ್ದಾರೆ.
ಮಳೆಗಾಲದಲ್ಲಿ ಬೀದಿಬದಿ ತಿಂಡಿಗಳನ್ನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿದೆ. ಜುಲೈ ತಿಂಗಳೊಂದರಲ್ಲೇ ರಾಜ್ಯದಲ್ಲಿ 2,752 ಟೈಫಾಯ್ಡ್ ಪ್ರಕರಣಗಳು ವರದಿ ಆಗಿವೆ. 10 ರೂಪಾಯಿ ಪಾನಿಪುರಿ ತಿಂದು 10 ಸಾವಿರ ರೂಪಾಯಿ ಆಸ್ಪತ್ರೆ ಬಿಲ್ ಕಟ್ಟುವಂತಾಗ್ತಿದೆ ಎಂದು ಡಾ ಶ್ರೀನಿವಾಸ್ ರಾವ್ ಹೇಳಿದ್ದಾರೆ.
ಪಾನಿಪುರಿ ರೆಸಿಪಿಯನ್ನು ಬಿಸಿನೀರಲ್ಲಿ ಮಾಡಬೇಕು, ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಬೀದಿಬದಿ ಆಹಾರ ಮಾರುವವರಿಗೆ ಸಲಹೆ ನೀಡಿದ್ದಾರೆ.