ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾಗೆ ರಾಜರತ್ನ ಫ್ಯಾನ್ಸ್ ಸಾಥ್ – ನಾಳೆಯೇ ತೆರೆಗೆ ‘ಡೊಳ್ಳು’ ಸಿನೆಮಾ

Dollu Cinema

ಡೊಳ್ಳು ಸಿನಿಮಾ (Dollu Cinema) ರಿಲೀಸ್ ಗೆ ಕೌಂಟ್ ಡೌನ್ ಶುರುವಾಗಿದೆ‌. ಇದೇ 26ರಂದು ರಾಜ್ಯಾದ್ಯಂತ ಚಿತ್ರ ತೆರೆಗಪ್ಪಳಿಸಲಿದೆ. ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪ್ರಶಸ್ತಿಗೆ ಪುರಸ್ಕೃತವಾಗಿರುವ ಹಾಗೂ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿಯೂ ಮನ್ನಣೆ ಪಡೆದಿರುವ ಈ ಸಿನಿಮಾ ತನ್ನ ವಿಭಿನ್ನ ಕಂಟೆಂಟ್ ನಿಂದ ಗಮನ ಸೆಳೆಯುತ್ತಿದೆ.

ಟೈಟಲ್ ಹೇಳುವಂತೆ ಇದು ಜನಪದ ಕಲೆ‌ ಡೊಳ್ಳು ಸುತ್ತ ಸಾಗುವ ಕಥೆಯಾಗಿದ್ದು, ಈ ಚಿತ್ರದ ಮೂಲಕ ನಿರ್ದೇಶಕ ಪವನ್ ಒಡೆಯರ್ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ರಿಲೀಸ್ ಹೊಸ್ತಿಲಿನಲ್ಲಿರುವ ಸಿನಿಮಾದ ಶಾಶ್ವತ ಯಾವುದು ಎಂಬ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫ್ಯಾನ್ಸ್ ರಿಲೀಸ್ ಮಾಡಿದ್ದಾರೆ. ಬದುಕಿನ ಅರ್ಥ ತಿಳಿಸುವ ಈ ಹಾಡಿಗೆ ಪವನ್ ಒಡೆಯರು ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಹಾಡು ಮೂಡಿಬಂದಿದೆ. ಈ ಬಗ್ಗೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ : ರಾಷ್ಟ್ರೀಯ ಫಿಲ್ಮ್ ಅವಾರ್ಡ್ಸ್ : ಡೊಳ್ಳು ಕನ್ನಡದ ಅತ್ಯುತ್ತಮ ಚಿತ್ರ

ನಿರ್ಮಾಪಕ ಪವನ್ ಒಡೆಯರ್ ಮಾತನಾಡಿ, ಉತ್ತರ ಕರ್ನಾಟಕದ ಕಡೆ ಸಾಕಷ್ಟು ರೆಸ್ಪಾನ್ಸ್ ಬರ್ತಿದೆ. ಮಾಲ್ ಗಳಲ್ಲಿ ರಿಲೀಸ್ ಆಗ್ತಿದೆ. ಸಿದ್ದರಾಮಯ್ಯ ಸರ್ ಅವರ ರಾಜಕೀಯ ಒತ್ತಡದ ನಡುವೆ ಬಿಡುವು ಮಾಡಿಕೊಂಡು ಬಂದು ಸಿನಿಮಾ ನೋಡಿರುವುದು ಖುಷಿ ಕೊಟ್ಟಿದೆ. ಇದೇ 26ಕ್ಕೆ ಡೊಳ್ಳು ಸಿನಿಮಾ (Dollu Cinema) ಚಿತ್ರ ತೆರೆಗೆ ಬರ್ತಿದ್ದು, ಇದು ನನ್ನ ಅಪೇಕ್ಷಾ ಮೊದಲ ಕನಸು ನೋಡಿ ಹರಸಿ ಎಂದರು.

Dollu Cinema

ನಿರ್ಮಾಪಕಿ ಅಪೇಕ್ಷಾ ಮಾತನಾಡಿ, ಡೊಳ್ಳು ಸಿನಿಮಾವನ್ನು(Dollu Cinema) ರಿಸ್ಕ್ ತೆಗೆದುಕೊಂಡು ರಿಲೀಸ್ ಮಾಡುತ್ತಿದ್ದೇವೆ. ಈ ರೀತಿ ಸಿನಿಮಾನ ಜನರಿಗೆ ತೋರಿಸಬೇಕು ಎಂಬುವುದು ನಮ್ಮ ಪ್ರಯತ್ನ. ಸಿನಿಮಾ ಅವಾರ್ಡ್ ಯಾಕೆ ಗೆದ್ದಿದೆ ಅನ್ನೋದಕ್ಕೆ ಸಿನಿಮಾ ನೋಡಿ. ಈ ಸಿನಿಮಾದಲ್ಲಿ ಬೇರೆ ಕಂಟೆಂಟೇ ಇದೆ. ಆಗಸ್ಟ್ 26ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂದರು.

ಇದನ್ನೂ ಓದಿ : ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ…

ಸಾಗರ್ ಪುರಾಣಿಕ್ ನಿರ್ದೇಶನ ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗಡೆ ಜೊತೆಗೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಮುಂತಾದ ಕಲಾವಿದರು ನಟಿಸಿದ್ದಾರೆ. ಒಡೆಯರ್ ಮೂವೀಸ್ ಬ್ಯಾನರ್ ನಡಿ ಪವನ್ ಒಡೆಯರ್, ಪತ್ನಿ ಅಪೇಕ್ಷಾ ಜೊತೆಗೂಡಿ ನಿರ್ಮಾಣ ಮಾಡಿದ್ದಾರೆ. ಆಗಸ್ಟ್ 26ರಂದು ‘ಡೊಳ್ಳು’ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಸಂಭಾಷಣೆ ಮತ್ತು ಚಿತ್ರಕಥೆಯನ್ನು ಶ್ರೀನಿಧಿ ಬರೆದಿದ್ದಾರೆ. ಅನಂತ್ ಕಾಮತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಭಿಲಾಷ್ ಕಲಾಥಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

LEAVE A REPLY

Please enter your comment!
Please enter your name here