ವೈದ್ಯರ ಮಂದೆ ಕುಳಿತ ವ್ಯಕ್ತಿಗೆ ಹಾರ್ಟ್​ ಅಟ್ಯಾಕ್ – ಜೀವ ಉಳಿಸಿದ ವೈದ್ಯ

Heart Attack

ವೈದ್ಯರು ಸಾಕ್ಷಾತ್ ದೇವರು ಎನ್ನುವ ಮಾತು ಪ್ರಚಲಿತದಲ್ಲಿದೆ. ಹಲವು ಸಲ ಈ ಮಾತು ರುಜುವಾತೂ ಆಗಿದೆ. ಇದೀಗ, ಅಂತಹದ್ದೇ ಒಂದು ಪ್ರಸಂಗ ನಡೆದಿದ್ದು, ವೈದ್ಯನೊಬ್ಬ ಕ್ಷಣಾರ್ಧದಲ್ಲಿಯೇ ವ್ಯಕ್ತಿಯೊಬ್ಬನನ್ನು ಹೃದಯಾಘಾತದಿಂದ (Heart Attack)  ಕಾಪಾಡಿ ಪ್ರಾಣ ಉಳಿಸಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದ ಕ್ಲಿನಿಕ್​ನಲ್ಲಿ ವೈದ್ಯನ ಮುಂದೆ ರೋಗಿಯೊಬ್ಬ ಕುಳಿತಿದ್ದಾನೆ. ಇದ್ದಕ್ಕಿಂದಂತೆಯೇ ರೋಗಿಗೆ ಹೃದಯಾಘಾತ (Heart Attack)  ಕಾಣಿಸಿಕೊಂಡಿದೆ.

ತಕ್ಷಣವೇ ಎಚ್ಚೆತ್ತ ವೈದ್ಯ ರೋಗಿಗೆ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಆತನ ಜೀವ ಕಾಪಾಡಿದ್ದಾನೆ. ಈ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದ್ದು, ಸದ್ಯ ಸಾಕಷ್ಟು ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ವೈದ್ಯನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ವೈದ್ಯನೇ ಮತ್ತೊಬ್ಬ ದೇವರು ಎಂದು ಹಾಡಿ ಹೊಗಳುತ್ತಿದ್ದಾರೆ.

ಇದನ್ನೂ ಓದಿ : Heart Attack: ವೇದಿಕೆಯಲ್ಲಿ ಕುಸಿದು ಪ್ರಾಣಬಿಟ್ಟ ಹನುಮನ ವೇಷಧಾರಿ

LEAVE A REPLY

Please enter your comment!
Please enter your name here