ಯೂಟ್ಯೂಬ್ ಎಲ್ಲರಿಗೂ ಪರಿಚಿತವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣ. ವಿಶ್ವದಲ್ಲಿ ಅತಿದೊಡ್ಡ ವಿಡಿಯೋ ಸಾಮಾಜಿಕ ಜಾಲತಾಣ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಆದರೆ, ಈ ಯೂಟ್ಯೂಬ್ನಲ್ಲಿ ಮೊದಲ ಅಪ್ಲೋಡ್ ಆದ ವಿಡಿಯೋ ಯಾವುದು ಎಂಬ ಜಿಜ್ಞಾಸೆ ಎಲ್ಲರಲ್ಲೂ ಮೂಡಿರುತ್ತದೆ. ಇದೀಗ, ಯೂಟ್ಯೂಬ್ ಸಂಸ್ಥೆಯೇ ಈ ಬಗ್ಗೆ ಮಾಹಿತಿ ನೀಡಿದೆ.
2005 ರ ಫೆಬ್ರವರಿ 14 ರಂದು ಯೂಟ್ಯೂಬ್ ಅಧಿಕೃತವಾಗಿ ಆರಂಭವಾಗಿತ್ತು. ಗೆಳೆಯರಾದ ಜಾವೇದ್ ಕರೀಮ್, ಸ್ವೀವ್ ವೆನ್, ಚಾರ್ಡ್ ಹರ್ಲಿ ಯುಟ್ಯೂಬ್ ಸ್ಥಾಪಕರು. ಇವರು ಅಮೆರಿಕದ ಇ–ಕಾಮರ್ಸ್ ಕಂಪನಿಯಲ್ಲಿನ ಕೆಲಸ ಬಿಟ್ಟು ಯುಟ್ಯೂಬ್ ಪ್ರಾರಂಭಿಸುತ್ತಾರೆ.
ಯೂಟ್ಯೂಬ್ ಆರಂಭವಾದ ಮೊದಲ ವರ್ಷದಲ್ಲಿಯೇ 2 ಕೋ. ವಿಡಿಯೋಗಳು ಅಪ್ಲೋಡ್ ಆಗುತ್ತವೆ. ಈ ಕಂಪೆನಿ ಆರಂಭಗೊಂಡು ಇಲ್ಲಿಗೆ 17 ವರ್ಷಗಳಾಗಿವೆ. ಕೋಟ್ಯಂತರ ವಿಡಿಯೋಗಳು ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿವೆ. ಪ್ರಸ್ತುತ, ಯೂಟ್ಯೂಬ್ಗೆ ಕೋಟ್ಯಂತರ ವಿಡಿಯೋಗಳು ಅಪ್ಲೋಡ್ ಆಗುತ್ತಿವೆ.
ಯೂಟ್ಯೂಬ್ ಆರಂಭವಾದ 2 ತಿಂಗಳ ನಂತರ ಮೊದಲ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಸಹ ಸಂಸ್ಥಾಪಕರಾಗಿದ್ದ ಜಾವೇದ್ ಕರೀಮ್ ಅವರು ಏಪ್ರೀಲ್ 23, 2005 ರಂದು ‘Me at the zoo’ ಎನ್ನುವ ಟ್ಯಾಗ್ ಲೈನ್ನಲ್ಲಿ 18 ಸೆಕೆಂಡ್ಗಳ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
View this post on Instagram
ಯೂಟ್ಯೂಬ್ನ ಮೊದಲ ವಿಡಿಯೋ ಎಂಬ ಹೆಗ್ಗಳಿಕೆ ಪಡೆದ ಈ 18 ಸೆಕೆಂಡುಗಳ ವಿಡಿಯೋ ಇಲ್ಲಿಯವರೆಗೆ ಬರೋಬ್ಬರಿ 235 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಪ್ರತಿನಿತ್ಯ ಕೋಟ್ಯಂತರ ಜನ ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ನೋಡುತ್ತಾರೆ.
ವಿಡಿಯೋ ಕ್ರಿಯೇಟ್ ಮಾಡಿ ಅಪ್ಲೋಡ್ ಮಾಡುವ ಸಾಕಷ್ಟು ಜನರು ಯೂಟ್ಯೂಬ್ನಿಂದ ಗಳಿಕೆಯನ್ನು ಮಾಡುತ್ತಿದ್ದಾರೆ.